ಟೀಮ್ ಇಂಡಿಯಾ ಟೆಸ್ಟ್ ನಾಯಕ ಧೋನಿ ಈ ಬಾರಿ ಹೊಸ ದಾಖಲೆಯನ್ನು ಮಾಡ ಹೊರಟಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರ ದಾಖಲೆಯೊಂದನ್ನು ಮುರಿಯುವ ಧಾವಂತದಲ್ಲಿದ್ದಾರೆ ಅವರು. ಪವರ್ ಹಿಟ್ಟರ್ ಮಾಡೋ ದಾಖಲೆ ಏನು ಗೊತ್ತಾ?
ಹೌದು, ಎಮ್ಎಸ್‌ಡಿ, ಕ್ರಿಕೆಟ್ ದೇವರು ಸಿಡಿಸಿರುವ ಸಿಕ್ಸರ್ ದಾಖಲೆಯನ್ನು ಅಳಿಸಿ ಮುಂದೆ ಹೋಗುವ ತವಕದಲ್ಲಿದ್ದಾರೆ. ಸಚಿನ್ ದಾಖಲೆ ಮುರಿಯಲು ಅವರಿಗೆ ಕೇವಲ ನಾಲ್ಕು ಸಿಕ್ಸರ್ ಅಗತ್ಯವಿದ್ದು ಮುಂಬರುವ ಕಿವೀಸ್ ಸರಣಿಯಲ್ಲಿ ಅವರದನ್ನು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ.
ಏಕದಿನ ಸರಣಿಯಲ್ಲಿ 463 ಪಂದ್ಯಗಳನ್ನಾಡಿರುವ ಸಚಿನ್ 195 ಸಿಕ್ಸರ್ ಸಿಡಿಸಿದ್ದಾರೆ. 277 ಏಕದಿನ ಪಂದ್ಯಗಳನ್ನಾಡಿರುವ ಧೋನಿ
192 ಸಿಕ್ಸರ್ ಸಿಡಿಸಿದ್ದಾರೆ. ಹೀಗಾಗಿ ಸಚಿನ್ ದಾಖಲೆ ಮುರಿಯಲು ಧೋನಿಗೆ ಕೇವಲ ನಾಲ್ಕು ಸಿಕ್ಸರ್ ಅಗತ್ಯವಿದೆ.
ಈ ಪಟ್ಟಿಯಲ್ಲಿ ಪಾಕ್ ಕ್ರಿಕೆಟಿಗ ಶಾಹೀದ್ ಆಫ್ರಿದಿ ಮೊದಲ ಸ್ಥಾನದಲ್ಲಿದ್ದಾರೆ. 398 ಪಂದ್ಯಗಳನ್ನಾಡಿರುವ ಅವರು 351 ಸಿಕ್ಸರ್ ಸಿಡಿಸಿದ್ದಾರೆ. ಲಂಕನ್ ಸ್ಪೋಟಕ ಆಟಗಾರ ಸನತ್ ಜಯಸೂರ್ಯ 445 ಪಂದ್ಯಗಳನ್ನಾಡಿದ್ದು 270 ಸಿಕ್ಸರ್ ಸಿಡಿ 2ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ 266 ಪಂದ್ಯಗಳನ್ನಾಡಿದ್ದು 238 ಮತ್ತು ಕಿವೀಸ್ ಬ್ಯಾಟ್ಸಮನ್ ಮೆಕಲಮ್ 260 ಪಂದ್ಯಗಳನ್ನಾಡಿದ್ದು 200 ಸಿಕ್ಸರ್ ಎತ್ತಿದ್ದಾರೆ.
ಈ ಪಟ್ಟಿಯಲ್ಲಿ ಸಚಿನ್ (ನ) 5 ಸ್ಥಾನದಲ್ಲಿದ್ದರೆ ಧೋನಿ 6 ನೇ ಸ್ಥಾನದಲ್ಲಿದ್ದಾರೆ. ಸಚಿನ್ ಅವರನ್ನು ಹಿಂದಿಕ್ಕಲು ಅವರಿಗೆ ಕೇವಲ 4 ಸಿಕ್ಸರ್ ಅಗತ್ಯವಿದೆ. ಭಾರತದ ಮತ್ತೋರ್ವ ಮಾಜಿ ಆಟಗಾರ ಸೌರವ್ ಗಂಗೂಲಿ 311 ಪಂದ್ಯಗಳನ್ನಾಡಿದ್ದು 190 ಸಿಕ್ಸರ್ ಬಾರಿಸುವುದರೊಂದಿಗೆ 7ನೇ ಸ್ಥಾನದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾದ ಆಟಗಾರ ಎಬಿಡಿ 182( 97 ಪಂದ್ಯ), ಆಸೀಸ್ ಮಾಜಿ ನಾಯಕ ರಿಕ್ಕಿ ಪಾಟಿಂಗ್ 162 (375), ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.
ಈಗಾಗಲೇ ಸಾಕಷ್ಟು ದಾಖಲೆ ಮಾಡಿರುವ ಧೋನಿ ಕಿವೀಸ್ ಸರಣಿಯಲ್ಲಿ ಹೆಲಿಕ್ಯಾಪ್ಟರ್ ಸಿಕ್ಸರ್‌ಗಳ ಸುರಿಮಳೆಗೈದು ತವರಿನಲ್ಲಿ ಮತ್ತೊಂದು ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ