ಅನ್ವರ್ ದಾಖಲೆಯನ್ನು ಮುರಿದವರಲ್ಲಿ ಸಚಿನ್ ಮೊದಲನೆಯವರೆನಿಸಿಕೊಂಡಿದ್ದಷ್ಟೇ ಅಲ್ಲ, 194 ರನ್ ಜತೆ ಸಹ ಅನ್ವರ್ ಅವರಿಗೆ ಸಚಿನ್ ಜತೆ ಕಹಿ ನಂಟಿದೆ. ಅವರ ವಿಶ್ವದಾಖಲೆ ಆಟ 200 ರನ್ ಗಡಿ ದಾಟದಿರುವುದಕ್ಕೂ ಸಚಿನ್ ಅವರೇ ಕಾರಣರಾಗಿದ್ದರು. ಅಂದು ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ಮುಂತಾದವರ ಬೌಲಿಂಗ್ ಹೆಡೆಮುರಿಕಟ್ಟಿ ಸಿಡಿಯುತ್ತಿದ್ದ ಅನ್ವರ್ ಅವರ ಅಬ್ಬರಕ್ಕೆ ಬ್ರೇಕ್ ಹಾಕಿದ್ದು ಇದೇ ಸಚಿನ್ ಅವರೇ ಆಗಿದ್ದರು.
ಸಚಿನ್ ರಮೇಶ್ ತೆಂಡೂಲ್ಕರ್ ಎಂಬ ಪಾರ್ಟ್ ಟೈಂ ಬೌಲರ್, ಅನ್ವರ್‌ನ ಇನ್ನಿಂಗ್ಸ್‌ಗೆ ಮಂಗಳ ಹಾಡಿಸಿ, 'ನೀನು ಮಾಡಿದ್ದು ಸಾಕು, ಒಂದಲ್ಲ ಒಂದು ದಿನ ನಿನ್ನ ದಾಖಲೆ ಮುರಿಯುತ್ತೇನೆ' ಎಂದು ಶಪಥ ಹೊತ್ತಂತೆಯೋ ಎಂಬಂತೆ ಬೌಲಿಂಗ್ ಮಾಡಿ, ಅನ್ವರ್ ವಿಕೆಟ್ ಉರುಳಿಸಿದ್ದರು. ಅನ್ವರ್ ಸಿಡಿಸಿದ ಚೆಂಡು ಸೌರವ್ ಗಂಗೂಲಿಯ ಭದ್ರ ಮುಷ್ಟಿಗಳೊಳಗೆ ಕುಳಿತಿತ್ತು. ವಿಶ್ವ ದಾಖಲೆ ಬರೆದರೂ ದ್ವಿಶತಕದ ಗಡಿಗೆ ಬಂದು ನಿರಾಶರಾಗಿ ಹಿಂತಿರುಗಿದ್ದರು ಅನ್ವರ್.