ಬಾಲಿವುಡ್‌ಗೆ ಸಚಿನ್ ಪುತ್ರಿ

ಶುಕ್ರವಾರ, 24 ಏಪ್ರಿಲ್ 2015 (08:35 IST)
ಕ್ರಿಕೆಟ್ ಜಗತ್ತಿನ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮುದ್ದಿನ ಮಗಳು ಸಾರಾ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಹೀಗೆಂದು ರಾಷ್ಟ್ರೀಯ ದಿನಪತ್ರಿಕೆಯೊಂದು ಸುದ್ದಿ ಪ್ರಕಟಿಸಿದೆ. 

18ರ ಹರೆಯದ ಸಾರಾ, ಶಾಹಿದ್ ಕಪೂರ್ ಜೋಡಿಯಾಗಿ ನಾಯಕಿಯಾಗಿ ನಟಿಸುವುದರ ಮೂಲಕ ಹಿಂದಿ ಸಿನಿಮಾರಂಗಕ್ಕೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
 
ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಅಭ್ಯಸಿಸುತ್ತಿರುವ ಸಾರಾ ಆಗಾಗ ಅಪ್ಪ- ಅಮ್ಮನ ಜತೆ ಕಾಣಿಸಿಕೊಳ್ಳುತ್ತಿರುತ್ತಾರೆ.
 
ಸಹೋದರ ಅರ್ಜುನ್ ಅಪ್ಪನಂತೆ ಕ್ರಿಕೆಟ್‌ಕಲಿಯಾಗುವತ್ತ ಗಮನ ಹರಿಸಿದ್ದಾರೆ. ಆದರೆ ಸಾರಾ ಮಾತ್ರ ಬಣ್ಣದ ಲೋಕದ ಕಡೆ ಮುಖ ಮಾಡಿ ಹೊರಟಿದ್ದಾರೆ. 
 
ಮಗಳು ಬೆಳ್ಳಿತೆರೆಗೆ ಬರಲು ತಯಾರಿ ನಡೆಸಿದ್ದರೆ ಸಚಿನ್ ಕೂಡ ತಮ್ಮ ಬಗೆಗಿನ ಸಾಕ್ಷ್ಯಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ