ಸಚಿನ್ ತೆಂಡುಲ್ಕರ್-ಝಾಕಿರ್ ಹುಸೇನ್ ಜುಗಲ್ ಬಂದಿಗೆ ವೀಕ್ಷಕರು ಫುಲ್ ಫಿದಾ
ಮಂಗಳವಾರ, 10 ಜನವರಿ 2017 (10:51 IST)
ಮುಂಬೈ: ಸಚಿನ್ ತೆಂಡುಲ್ಕರ್ ಅಪ್ಪಟ ಕ್ರಿಕೆಟ್ ಆಟಗಾರ ಎಂದೇ ನಮಗೆ ಗೊತ್ತಿರುವುದು. ಆದರೆ ಅವರಿಗೆ ಸಂಗೀತದಲ್ಲೂ ಆಸಕ್ತಿ ಇದೆ ಎಂದು ಎಲ್ಲೋ ಓದಿ ಗೊತ್ತಿರುತ್ತದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ಇನ್ನೊಂದು ಮುಖವೂ ಅನಾವರಣಗೊಂಡಿತು.
ಒಂದೆಡೆ ತಬಲಾ ಮಾಂತ್ರಿಕ ಝಾಕಿರ್ ಹುಸೇನ್ ಎಂದಿನಂತೆ ಅದ್ಭುತವಾಗಿ ತಬಲಾ ನುಡಿಸುತ್ತಿದ್ದರೆ, ಇನ್ನೊಂದೆಡೆ, ಅವರಿಗೆ ಸಾಥ್ ಕೊಡುತ್ತಿದ್ದುದು ಸಚಿನ್ ತೆಂಡುಲ್ಕರ್! ಅದೂ ಸುಮ್ಮನೇ ಪ್ರೇಕ್ಷಕನಾಗಿ ಕೂತಿರಲಿಲ್ಲ. ತಾವೂ ಸ್ಲಿಟ್ ಗಾಂಗ್ ಎನ್ನುವ ಸಂಗೀತೋಪಕರಣ ಬಳಸಿ ಝಾಕಿರ್ ಗೆ ಸಾಥ್ ನೀಡಿದರು.
ಕೆಲವು ದಿನಗಳ ಹಿಂದೆಯೇ ಈ ಕಾರ್ಯಕ್ರಮದ ಕುರಿತು ಸಚಿನ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹೇಳಿಕೊಂಡಿದ್ದರು. ಇದೀಗ ಸಚಿನ್ ಝಾಕಿರ್ ರೊಂದಿಗೆ ನುಡಿಸಿದ ಸಂಗೀತ ಜುಗಲ್ ಬಂದಿ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹಿಟ್ ಆಗಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ