ಸದ್ಯದಲ್ಲೇ ನಿರೀಕ್ಷಿಸಿ ಮಹಿ-ಯುವಿ ಜುಗಲ್ ಬಂದಿ ಎಂದ ಯುವರಾಜ್ ಸಿಂಗ್
ಮಂಗಳವಾರ, 10 ಜನವರಿ 2017 (11:54 IST)
ನವದೆಹಲಿ: ಕೆಲವು ವರ್ಷಗಳ ಹಿಂದೆ ಟೀಂ ಇಂಡಿಯಾದಲ್ಲಿ ರನ್ ಚೇಸಿಂಗ್ ಇದ್ದಾಗ ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಜೋಡಿಯದ್ದೇ ಕಾರುಬಾರು. ಅದೀಗ ಮತ್ತೆ ನೋಡಬಹುದು ಎಂದಿದ್ದಾರೆ ಯುವಿ.
ಹಲವು ವರ್ಷಗಳ ನಂತರ ಯುವರಾಜ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಧೋನಿ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ. ಹಿಂದಿನ ಸಹ ಆಟಗಾರರಾದ ಸುರೇಶ್ ರೈನಾ, ಆಶಿಷ್ ನೆಹ್ರಾ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಹಳೆಯ ದಿನಗಳನ್ನು ಮತ್ತೆ ಮರಳಿ ತರುತ್ತೇವೆ ಎಂದು ಅಭಿಮಾನಿಗಳಿಗೆ ಪ್ರಾಮಿಸ್ ಮಾಡಿದ್ದಾರೆ ಯುವಿ.
ಆದರೆ ಈಗ ಟೀಂ ಇಂಡಿಯಾ ಮೊದಲಿದ್ದಂತಿಲ್ಲ. ವಿರಾಟ್ ಕೊಹ್ಲಿ ಎಂಬ ಸೂಪರ್ ಸ್ಟಾರ್ ಮೇಲೆ ನಿಂತಿದೆ ಎಂಬುದನ್ನು ಯುವಿ ಚೆನ್ನಾಗಿ ಅರಿತಿದ್ದಾರೆ. ವಿರಾಟ್ ನಂತೆ ಮೂರೂ ಮಾದರಿಯ ಪಂದ್ಯಗಳಲ್ಲಿ 50 ಸರಾಸರಿ ಹೊಂದಿದ ಬ್ಯಾಟ್ಸ್ ಮನ್ ಇರುವಾಗ ತಮಗೆ ಕೆಲಸ ಕಡಿಮೆ ಎನ್ನುವುದು ಅವರಿಗೆ ಗೊತ್ತು. ಆದರೆ ಮತ್ತೆ 35 ವರ್ಷದ ಯುವಿಗೆ ಮೊದಲಿನ ರೀತಿ ಆಡಲು ಸಾಧ್ಯವೇ ಎಂಬುದು ಅಭಿಮಾನಿಗಳ ಅನುಮಾನ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ