ಇದನ್ನು ನೀವು ನಂಬುತ್ತೀರೋ ಇಲ್ಲವೋ! ಆದರೆ ಇದು ನಡೆದಿದ್ದಂತೂ ಸತ್ಯ. ಗಾಂಧಿ ತಾತನ ಹುಟ್ಟೂರು ಪೋರ್‍ಬಂದರ್‌ನಲ್ಲಿ 80 ವರ್ಷದ ವೃದ್ಧರೊಬ್ಬರು ತಂದೆಯಾಗಿದ್ದಾರೆ. ಅವರ ಪತ್ನಿ ಈ ತಿಂಗಳ 11ರಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುವುದರ ಮೂಲಕ ಅಜ್ಜನಿಗೆ ಅಪ್ಪನಾಗುವ ಭಾಗ್ಯ ಕರುಣಿಸಿದ್ದಾರೆ. ಅವರ ಮೊದಲ ಮಗಳ ವಯಸ್ಸು 50. ಈಗ ತಾನು ತಮ್ಮನನ್ನು ಪಡೆದಿರುವುದರ ಬಗ್ಗೆ ಆಕೆಯ ಖುಷಿಯಂತೂ ಹೇಳತೀರದಾಗಿದೆ.
ತನ್ನ 21ನೇ ವಯಸ್ಸಿನಲ್ಲಿ ಮೊದಲನೇ ಮದುವೆಯಾಗಿದ್ದ ಭೀಕುಬಾಯಿ ಆ ಪತ್ನಿಯಿಂದ 5 ಹೆಣ್ಣುಮಕ್ಕಳ ತಂದೆಯಾಗಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಪತ್ನಿ 3 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅವರ ಹೆಣ್ಣು ಮಕ್ಕಳು ಸಹ ಮದುವೆಯಾಗಿ ಗಂಡನ ಮನೆಯಲ್ಲಿರುವುದರಿಂದ ಭೀಕುಬಾಯಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು. ತಂದೆಯ ಏಕಾಂಗಿತನವನ್ನು ಸಹಿಸಲಾಗದೇ ಅವರ 50 ವರ್ಷದ ಮಗಳು ಅಪ್ಪನಿಗೆ ಮರುಮದುವೆ ಮಾಡುವ ಯೋಚನೆ ಮಾಡಿದರು.
ಇದರಿಂದ ಬಹಳ ಸಂತಸಗೊಂಡಿರುವ ಭೀಕುಬಾಯಿಯ ಮೊದಲು ಮಗಳು ಲಕೀಬೆನ್, "ನಮ್ಮ ಕುಟುಂಬದಲ್ಲಿ ಗಂಡು ಮಕ್ಕಳಿಲ್ಲ ಎಂಬ ಕೊರಗು ಕಾಡುತ್ತಿತ್ತು. ಇಷ್ಟುದಿನ ನಮಗೆ ಸಹೋದರನಿಲ್ಲವಲ್ಲ ಬೇಸರವಾಗುತ್ತಿತ್ತು. ಆದರೆ ಈಗ ದೇವರ ದಯೆಯಿಂದ ನಾವು ತಮ್ಮನನ್ನು ಪಡೆದಿದ್ದೇವೆ", ಎನ್ನುತ್ತಾಳೆ .