ಇತ್ತೀಚೆಗೆ ಬಹುತೇಕರಿಗೆ ಮಲಬದ್ಧತೆ ಸಮಸ್ಯೆಯಿದೆ. ಮಲಬದ್ಧತೆ ಸಮಸ್ಯೆ ಇರುವವರು ಹಣ್ಣು ಸೇವನೆ ಮಾಡಲು ಸೂಕ್ತ ಸಮಯ ಯಾವುದು ಗೊತ್ತಾ? ತಜ್ಞರು ಹೇಳುವುದು ಏನು ನೋಡಿ.
ಮಲಬದ್ಧತೆ ಇರುವವರು ತಮ್ಮ ಆಹಾರ ಮತ್ತು ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು. ಹೆಚ್ಚು ಹೊತ್ತು ಕೂತಲ್ಲೇ ಕೂರುವುದನ್ನು ಅವಾಯ್ಡ್ ಮಾಡಬೇಕು. ಪ್ರತಿನಿತ್ಯ ಹದ ಬಿಸಿನೀರಿನಲ್ಲಿ ಕೂತು ಗುದದ್ವಾರದ ಅಂಗಾಂಶಗಳು ಮೃದುವಾಗುವಂತೆ ನೋಡಿಕೊಳ್ಳಬೇಕು.
ಇನ್ನು ಆಹಾರದಲ್ಲಿ ಸಾಕಷ್ಟು ಫೈಬರ್ ಅಂಶ ಸೇವನೆ ಮಾಡುವುದು ಮುಖ್ಯ. ಅದರಲ್ಲೂ ಪಪ್ಪಾಯ, ಪಚ್ಚೆ ಬಾಳೆಹಣ್ಣು, ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ಹೆಚ್ಚು ಸೇವನೆ ಮಾಡಬೇಕು. ಆದರೆ ಇದನ್ನು ಸರಿಯಾದ ಸಮಯದಲ್ಲಿ ಸೇವನೆ ಮಾಡುವುದು ಮುಖ್ಯ.
ವಿಶೇಷವಾಗಿ ಹಣ್ಣುಗಳನ್ನು ಸಂಜೆ ವೇಳೆ ತಿನ್ನುವುದು ಸೂಕ್ತ. ಯಾಕೆಂದರೆ ಸಂಜೆ ಹೊತ್ತು ಹಣ್ಣು ಸೇವನೆ ಮಾಡುವುದರಿಂದ ಅದು ಜೀರ್ಣವಾಗಿ ಮರುದಿನ ಬೆಳಗ್ಗೆ ಮಲ ವಿಸರ್ಜನೆ ಸುಗಮಗೊಳಿಸುತ್ತದೆ. ಹೀಗಾಗಿ ಸಂಜೆ ಹೊತ್ತು ಹಣ್ಣುಗಳನ್ನು ಸೇವನೆ ಮಾಡುವುದು ಸೂಕ್ತ.