ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಲೇ ಇದ್ದು, ಆರೋಗ್ಯವನ್ನು ಸಮತೋಲದನದಲ್ಲಿಡಲು ಸಾಕಷ್ಟು ನೀರನ್ನು ಸೇವಿಸುವುದು ಉತ್ತಮ. ಇನ್ನೂ ಈ ಸಮಯದಲ್ಲಿ ದೇಹವನ್ನು ಮತ್ತಷ್ಟು ತಂಪಾಗಿರಿಸಲು ಎಳನೀರು ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಎಳನೀರು ಪ್ರಕೃತಿ ನಮಗೆ ನೀಡಿರುವ ಅದ್ಭುತ ಪಾನೀಯ. ಇದನ್ನು ದಿನನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಅವುಗಳ ಪಟ್ಟಿ ಇಲ್ಲಿದೆ.
ಎಳನೀರಿನ ಪ್ರಮುಖ ಪ್ರಯೋಜನಗಳು:
ದೇಹಕ್ಕೆ ತಂಪು: ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕವಾಗಿ ದೇಹವನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ.
ಪೋಷಕಾಂಶಗಳ ಆಗರ: ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಎಲೆಕ್ಟ್ರೋಲೈಟ್‌ಗಳು ಸಮೃದ್ಧವಾಗಿವೆ.
ಜೀರ್ಣಕ್ರಿಯೆಗೆ ಸಹಕಾರಿ: ಎಳನೀರು ಕುಡಿಯುವುದರಿಂದ ಅಸಿಡಿಟಿ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ದೂರವಾಗುತ್ತವೆ.
ರಕ್ತದೊತ್ತಡ ನಿಯಂತ್ರಣ: ಇದರಲ್ಲಿರುವ ಪೊಟ್ಯಾಸಿಯಮ್ ಅಂಶವು ಅಧಿಕ ರಕ್ತದೊತ್ತಡವನ್ನು (Blood Pressure) ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ಕಿಡ್ನಿ ಆರೋಗ್ಯ: ಇದು ಮೂತ್ರಪಿಂಡದಲ್ಲಿ ಕಲ್ಲುಗಳು (Kidney Stones) ಉಂಟಾಗುವುದನ್ನು ತಡೆಯಲು ಮತ್ತು ಮೂತ್ರನಾಳದ ಸೋಂಕನ್ನು ನಿವಾರಿಸಲು ಸಹಕಾರಿ.
ಚರ್ಮದ ಸೌಂದರ್ಯ: ಎಳನೀರು ಕುಡಿಯುವುದರಿಂದ ಚರ್ಮವು ಕಾಂತಿಯುತವಾಗುತ್ತದೆ ಮತ್ತು ಮೊಡವೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.
ತೂಕ ಇಳಿಕೆ: ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಪಾನೀಯ.