ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನತಾಪ ಹೆಚ್ಚುತ್ತಲೇ ಇದೆ. ಇದರಿಂದ ಆರೋಗ್ಯದಲ್ಲೂ ಏರುಪೇರಾಗುವ ಸಾಧ್ಯತೆಯೂ ಇದೆ.
ಈ ಸಮಯದಲ್ಲಿ ವಾತಾವರಣದ ಉಷ್ಣಾಂಶ ಹೆಚ್ಚಿರುವುದರಿಂದ ನಮ್ಮ ದೇಹದಲ್ಲಿನ ನೀರಿನಂಶ ಬೆವರಿನ ರೂಪದಲ್ಲಿ ಬೇಗನೆ ಕಡಿಮೆಯಾಗುತ್ತದೆ. ಇದನ್ನು ನಿರ್ಜಲೀಕರಣ ಎನ್ನಲಾಗುತ್ತದೆ. ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ನೀರನ್ನು ನಿಯಮಿತವಾಗಿ ಕುಡಿಯಬೇಕು.
ಹೊರಗಡೆ ಹೋಗುವಾಗ ಯಾವಾಗಲೂ ನೀರಿನ ಬಾಟಲಿಯನ್ನು ಜೊತೆಯಲ್ಲಿ ಇಟ್ಟುಕೊಳ್ಳಿ.
2. ನೀರಿನಂಶವಿರುವ ಹಣ್ಣು-ತರಕಾರಿಗಳು
ಬರಿ ನೀರು ಕುಡಿಯುವುದು ಬೇಸರವೆನಿಸಿದರೆ, ಈ ಕೆಳಗಿನ ಆಹಾರಗಳನ್ನು ಸೇವಿಸಿ:
ಹಣ್ಣುಗಳು: ಕಲ್ಲಂಗಡಿ ಕರ್ಬೂಜ, ಕಿತ್ತಳೆ, ಮತ್ತು ದ್ರಾಕ್ಷಿ.
ತರಕಾರಿಗಳು: ಸೌತೆಕಾಯಿ, ಸೋರೆಕಾಯಿ, ಮತ್ತು ಟೊಮೆಟೊ