ಗೋಡಂಬಿಯಿಂದ ಐದು ಆರೋಗ್ಯ ಪ್ರಯೋಜನಗಳು

ಗುರುವಾರ, 28 ಜುಲೈ 2016 (09:43 IST)
ಗೋಡಂಬಿ ಜಗತ್ತಿನ ಅತಿ ಆರೋಗ್ಯದಾಯಕ ಆಹಾರ ಎಂದು ಕರೆಯಬಹುದು. ಇದರಲ್ಲಿ ಪ್ರೋಟೀನ್, ವಿಟಾಮಿನ್, ಖನಿಜಗಳು, ಮಿನಿರಲ್‌ಗಳು ಇರುತ್ತವೆ. ಆರೋಗ್ಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಲ್ಲಿ ಗೋಡಂಬಿಯ ಪಾತ್ರ ಮುಖ್ಯವಾಗುತ್ತದೆ. ತೂಕ  
ಇಳಿಕೆ ಮಾಡಿಕೊಳ್ಳುವವರು ಗೋಡಂಬಿ ಸೇವಿಸಿ.. ನಿಯಮಿತವಾಗಿ ಮಿತಿಯೊಳಗೆ ತೆಗೆದುಕೊಂಡರೆ ಅದ್ಫುತ ಆರೋಗ್ಯ ಪ್ರಯೋಜನವನ್ನು ಇದರಿಂದ ಪಡೆದುಕೊಳ್ಳಬಹುದು.



ಗೋಡಂಬಿಯಿಂದ ದೊರೆಯುವ ಐದು ಆರೋಗ್ಯಕಾರಿ ಪ್ರಯೋಜನಗಳು ಇಲ್ಲಿವೆ.
 
ಹೃದಯದ ಆರೋಗ್ಯಕ್ಕೆ ಗೋಡಂಬಿ.
ಗೋಡಂಬಿಯು ಹೃದಯದ ಆರೋಗ್ಯಕ್ಕೆ ಉಪಯೋಗಕಾರಿಯಾದದ್ದು, ಗೋಡಂಬಿಯಲ್ಲಿ ಕೋಲೆಸ್ಟ್ರಾಲ್ ಇದ್ರೂ ಆರೋಗ್ಯದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ. ಗೋಡಂಬಿಯನ್ನು ತಿನ್ನುವುದರಿಂದ ಹೃದಯದ ಸ್ನಾಯುಗಳು ಬಲಗೊಳ್ಳುತ್ತವೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಫೈಬರ್,ಪ್ರೋಟೀನ್, ಅರ್ಜಿನೈನ್ ಅಂಶ ಇರುವುದರಿಂದ ನಿತ್ಯವು ಗೋಡಂಬಿ ಸೇವಿಸುವುದು ಉತ್ತಮ..
 
ಮೂಳೆ ಆರೋಗ್ಯ
ಗೋಡಂಬಿಯಲ್ಲಿ ಕ್ಯಾಲ್ಸಿಯಂ.ಮೆಗ್ನೇಷಿಯಂ ಹಾಗೂ ಪೊಟ್ಯಾಶಿಯಮ್ ಖನಿಜಗಳು ಇರುವುದರಿಂದ ಮೂಳೆ ಕಾಯಿಲೆಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ನಿಯಮಿತವಾಗಿ ಬಾದಾಮಿ ಹಾಲು ಕುಡಿಯುವುದರಿಂದ ಮೂಳೆಗಳು ಧೃಡವಾಗುತ್ತವೆ.. ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅಲ್ಲದೇ ಗೋಡಂಬಿಯಲ್ಲಿ ವಿಟಾಮಿನ್ ಕೆ ಇದ್ದು, ಇದು ಮೂಳೆ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಲ್ಲದ್ದು.
 
ಕಣ್ಣಿನ ಆರೋಗ್ಯ...
ಕಣ್ಣುಗಳನ್ನು ಹಾಗೂ ಕಣ್ಣಿನ ಪೊರೆಯನ್ನು ರಕ್ಷಿಸಲು ಗೋಡಂಬಿ ಸಹಾಯಕಾರಿಯಾಗಬಲ್ಲದ್ದು, ಲುಥೆನ್ ಹಾಗೂ ಜಿಯಾಕ್ಸಾಂಥಿನ್ ಅಂಶ ಗೋಡಂಬಿಯಲ್ಲಿ ಇರುವುದರಿಂದ ಕಣ್ಣಿನ ಪೊರೆಯನ್ನು ರಕ್ಷಣೆ ಮಾಡುತ್ತದೆ.. 

ರಕ್ತ ಸಂಬಂಧಿತ ರೋಗ ತಡೆ
ಹೆಚ್ಚಿನ ಪ್ರಮಾಣದಲ್ಲಿ ಗೋಡಂಬಿ ಸೇವನೆಯಿಂದ ರಕ್ತ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಬಹುದು... ರಕ್ತದಲ್ಲಿ ಕಬ್ಬಿಣದ ಅಂಶ ಕೊರತೆ ಇರುವವರು ಗೋಡಂಬಿಯನ್ನು ನಿತ್ಯವು ಸೇವಿಸಬೇಕು. 

ತೂಕ ಇಳಿಕೆ
ಬಾದಾಮಿ ಗೋಡಂಬಿಗಳನ್ನು ತಿನ್ನುವುದರಿಂದ ಸಣ್ಣಗಾಗುವುದಕ್ಕೆ ಬಹಳ ಉಪಯುಕ್ತವಾಗುತ್ತದೆ. ಈ ನಟ್‌ಗಳಲ್ಲಿ ಹೆಚ್ಚು ಕೊಬ್ಬು ಹಾಗೂ ಕ್ಯಾಲರಿಗಳು ಇದ್ದರೂ ಇದು ತೂಕವನ್ನು ಹೆಚ್ಚಿಸುವುದಿಲ್ಲ. ನಿತ್ಯವೂ ಗೋಡಂಬಿ ಸೇವನೆ ಮಾಡಿದ್ರೆ ಮಿನಿರಲ್ ಹಾಗೂ ವಿಟಮಿನ್‌ಗಳು ದೊರೆಯುತ್ತದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

ವೆಬ್ದುನಿಯಾವನ್ನು ಓದಿ