ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

Krishnaveni K

ಗುರುವಾರ, 19 ಮಾರ್ಚ್ 2026 (11:39 IST)
ಇಂದು ಯುಗಾದಿ ಹಬ್ಬವಾಗಿದ್ದು ಎಲ್ಲರೂ ಬೆಲ್ಲದ ಜೊತೆಗೆ ಚೂರು ಬೇವನ್ನೂ ಸೇವಿಸುತ್ತಾರೆ. ಆದರೆ ಇದು ಒಂದು ದಿನಕ್ಕೆ ಸೀಮಿತವಲ್ಲ. ಪ್ರತಿನಿತ್ಯ ಕಹಿಬೇವಿನ ಎಲೆ ಸೇವಿಸಿದರೆ ಏನು ಉಪಯೋಗ ತಿಳಿದುಕೊಳ್ಳಿ.

ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಬೇವಿನ ಎಲೆಗೆ ಅದರದ್ದೇ ಆದ ಮಹತ್ವವಿದೆ. ಹಲವು ಖಾಯಿಲೆಗಳಿಗೆ ಔಷಧಿಯಾಗಬಲ್ಲ ಪವರ್ ಫುಲ್ ಎಲೆಯಿದು. ಚರ್ಮ ರೋಗದಿಂದ ಹಿಡಿದು ಹೊಟ್ಟೆಯ ಸಮಸ್ಯೆಯವರೆಗೂ ಕಹಿಬೇವು ಉಪಯೋಗಿ. ಇದರಲ್ಲಿ ರೋಗ ನಿರೋಧಕ, ಸೋಂಕು ನಿರೋಧಕ, ಉರಿಯೂತ ನಿರೋಧಕ ಅಂಶವಿದ್ದು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಕಹಿ ಬೇವಿನ ಒಂದು ಎಲೆ ಪ್ರತಿನಿತ್ಯ ಜಗಿದರೆ ಏನು ಉಪಯೋಗ ನೋಡಿ.

-ಪ್ರತಿನಿತ್ಯ ಒಂದು ಎಲೆ ಕಹಿಬೇವು ಜಗಿದರೆ ರಕ್ತ ಶುದ್ಧಿಯಾಗುತ್ತದೆ. ಇದರಿಂದ ಚರ್ಮ ಸಂಬಂಧೀ ಆರೋಗ್ಯ ಸಮಸ್ಯೆಗಳು ಬಾರದು. ಜೊತೆಗೆ ಚರ್ಮ ಕಾಂತಿಯುತವಾಗುತ್ತದೆ.
-ಕಹಿಬೇವಿನಲ್ಲಿ ರೋಗ ನಿರೋಧಕ ಶಕ್ತಿಯಿದೆ. ಇದನ್ನು ಸೇವನೆ ಮಾಡುವುದರಿಂದ ಸೋಂಕು ರೋಗಗಳು, ಫಂಗಸ್ ನಿಂದ ಬರುವಂತಹ ಖಾಯಿಲೆಗಳು ಬಾರದು.
-ಹೊಟ್ಟೆಗೂ ಇದು ಆರೋಗ್ಯಕರ. ಬೇವಿನ ಎಲೆ ಸೇವನೆ ಮಾಡುವುದರಿಂದ ಹೊಟ್ಟೆ ಹುಳಗಳು ನಿವಾರಣೆಯಾಗುತ್ತದೆ ಮತ್ತು ಜೀರ್ಣಶಕ್ತಿ ವೃದ್ಧಿಸುತ್ತದೆ.
-ಮಧುಮೇಹ ಇರುವವರು ಪ್ರತಿನಿತ್ಯ ಒಂದು ಕಹಿ ಬೇವಿನ ಎಲೆ ತಿನ್ನುವುದರಿಂದ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ.
-ದಿನಕ್ಕೆ 2-3 ಎಳೆಯ ಕಹಿಬೇವಿನ ಎಲೆ ಸೇವಿಸಿದರೂ ಸಾಕು. ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಲೆ ಸೇವಿಸಿ ಒಂದು ಲೋಟದಷ್ಟು ನೀರು ಸೇವನೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ