ಬಿಳಿ ತ್ವಚೆ ಪಡೆಯಲು ಮನೆಯಲ್ಲಿ ತಯಾರಿಸಿದ ಸ್ನಾನದ ಪೌಡರ್

ಮಂಗಳವಾರ, 9 ಆಗಸ್ಟ್ 2016 (09:08 IST)
ಸಾಮಾನ್ಯವಾಗಿ ಕಪ್ಪುಗಿರುವವರು ಬಿಳಿ ಚರ್ಮ ಪಡೆಯಲು ಕೈಗೆ ಸಿಕ್ಕ ಸಿಕ್ಕ ಕ್ರೀಮ್‌ಗಳಿಗಾಗಿ ದುಡ್ಡು ಖರ್ಚು ಮಾಡುತ್ತಾರೆ. ಕಪ್ಪು ಚರ್ಮ ಇರುವವರು ಬಿಳಿ ತ್ವಚೆ ಪಡೆಯುವುದು ಕಷ್ಟದ ಕೆಲಸವೇನಲ್ಲ, ಇದಕ್ಕಾಗಿ ಚಿಂತಿಸಬೇಕಾಗಿಲ್ಲ. ಸೂರ್ಯನ ಕಿರಣಕ್ಕೆ ಮುಖ ಕಪ್ಪಗಾಗುವುದು ಸಾಮಾನ್ಯ.. ಇಂಥ ವೇಳೆಯಲ್ಲಿ ಬಿಳಿ ತ್ವಚೆ ಪಡೆಯಲು ಸ್ನಾನದ ಪೌಡರನ್ನು ಮನೆಯಲ್ಲೇ ತಯಾರಿಸಬಹುದು. 

 
ಪೌಡರ್‌ಗೆ ಬೇಕಾಗುವ ಸಾಮಾಗ್ರಿ

ಹೆಸರು ಬೇಳೆ (ಪುಡಿ ರೂಪದಲ್ಲಿ ಮಾಡಿಕೊಳ್ಳಬೇಕು)
ಕಿತ್ತಳೆ ಸಿಪ್ಪೆ ಪೌಡರ್ 
ಶ್ರೀಗಂಧದ ಪುಡಿ
ಕಡ್ಲೆಹಿಟ್ಟು 
 
ಅರ್ಧಕಪ್ ಕಡ್ಲೆಹಿಟ್ಟು ತೆಗೆದುಕೊಂಡು, ಇದರಲ್ಲಿ ಅರ್ಧ  ದಷ್ಟು ಕಪ್ ಹೆಸರು ಬೇಳೆ ಪೌಡರ್ ಹಾಕಿಕೊಳ್ಳಬೇಕು. ಅದಾದ ಮೇಲೆ 1/4 ಕಪ್‌ನಷ್ಟು ಶ್ರೀಗಂಧದ ಪುಡಿ ಹಾಗೂ 1/4 ಕಪ್ ಕಿತ್ತಳೆ ಸಿಪ್ಪೆ ಪೌಡರ್ ಎಲ್ಲವನ್ನು ಮಿಕ್ಸ್ ಮಾಡಿಟ್ಟುಕೊಳ್ಳಿ. 
 
ಹಚ್ಚಿಕೊಳ್ಳುವ ವಿಧಾನ- 
 
ಮಿಕ್ಸ್ ಮಾಡಿಟ್ಟುಕೊಂಡಿರುವ ಪೌಡರ್‌ನ್ನು ಹಾಲಿನ ಜತೆಗೆ ಮಿಕ್ಸ್ ಮಾಡಿ ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಬೇಕು. ಈ ವೇಳೆ ನಿಧಾನವಾಗಿ ರಬ್ ಮಾಡಿ, ಕೆಲ ನಿಮಿಷದ ಬಳಿಕ ತೊಳೆದುಕೊಳ್ಳಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

ವೆಬ್ದುನಿಯಾವನ್ನು ಓದಿ