ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರಲು ಏನು ಮಾಡಬೇಕು

Krishnaveni K

ಶನಿವಾರ, 4 ಏಪ್ರಿಲ್ 2026 (13:21 IST)
ನಮ್ಮ ದೈಹಿಕ ಆರೋಗ್ಯ ಚೆನ್ನಾಗಿರಬೇಕೆಂದರೆ ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತ ಕಣ ಸಮತೋಲನದಲ್ಲಿರುವುದು ತುಂಬಾ ಮುಖ್ಯ. ಇವುಗಳಲ್ಲಿ ಯಾವುದಾದರೂ ಒಂದು ಹೆಚ್ಚು-ಕಡಿಮೆಯಾದರೂ ಅನೇಕ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.

ಬಿಳಿ ರಕ್ತ ಕಣ ಮತ್ತು ಕೆಂಪು ರಕ್ತಕಣ ಸಮತೋಲನದಲ್ಲಿರಲು ದಿನಕ್ಕೆ 7-8 ಗಂಟೆ ಸಮಯ ನಿದ್ರೆ ತುಂಬಾ ಅವಶ್ಯಕ. ಜೊತೆಗೆ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಧೂಮಪಾನ ಮತ್ತು ಮದ್ಯಪಾನ ಅಭ್ಯಾಸಗಳನ್ನು ತ್ಯಜಿಸಬೇಕು.

-ವಿಶೇಷವಾಗಿ ಆಹಾರದಲ್ಲಿ ವಿಟಮಿನನ್ ಸಿ, ಕಬ್ಬಿಣದಂಶವಿರುವ ಆಹಾರಗಳನ್ನು ತೆಗೆದುಕೊಳ್ಳಬೇಕು. ಇವು ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
-ದೇಹದಲ್ಲಿ ಸೋಂಕುಗಳು ಹರಡದಂತೆ, ರೋಗ ನಿರೋಧ ಶಕ್ತಿ ವೃದ್ಧಿಸಲು, ಖಾಯಿಲೆಗಳಿಂದ ರಕ್ಷಿಸಲು ಬಿಳಿ ರಕ್ತ ಕಣ ತುಂಬಾ ಅಗತ್ಯ.
-ಶ್ವಾಸಕೋಶದಿಂದ ಆಕ್ಸಿಜನ್ ನ್ನು ದೇಹದ ಅಂಗಾಂಶಗಳಿಗೆ ಪೂರೈಸಲು ಕೆಂಪು ರಕ್ತ ಕಣ ತುಂಬಾ ಅಗತ್ಯ. ರಕ್ತದೊತ್ತಡ ಸಮಪ್ರಮಾಣದಲ್ಲಿಡಲು, ರಕ್ತ ಸಂಚಾರ ಸುಗಮವಾಗಿ ಸಾಗಲು ಕೆಂಪು ರಕ್ತ ಕಣಗಳು ಅಗತ್ಯ.
-ಬಿಳಿ ಮತ್ತು ಕೆಂಪು ರಕ್ತಕಣಗಳು ಸಮಾನ ಸಂಖ್ಯೆಯಲ್ಲಿರಲು ದೇಹ ತೂಕ ಸಮತೋಲನದಲ್ಲಿಡಿ. ಸಾಕಷ್ಟು ನೀರು ಸೇವನೆ ಮಾಡುತ್ತಿರಬೇಕು. ನಿರ್ಜಲೀಕರಣದಿಂದ ರಕ್ತ ಕಣಗಳ ಮೇಲೆ ಪರಿಣಾಮಬೀರಬಹುದು.
-ಬಿಳಿ ಮತ್ತು ಕೆಂಪು ರಕ್ತಕಣಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದೇ ಇದ್ದಾಗ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪಡೆಯಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ