ಸದ್ಯ ರಾಜ್ಯದಲ್ಲಿ ಬಿಸಿಲ ತಾಪ ಹೆಚ್ಚುತ್ತಲೇ ಇದೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ದೇಹವನ್ನು ತಂಪಾಗಿರಿಸಲು ಮತ್ತು ನಿರ್ಜಲೀಕರಣ ತಡೆಯಲು ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸಬೇಕು. ನೀರಿನಂಶವಿರುವ ತರಕಾರಿಗಳನ್ನು ನಾವು ಸೇವಿಸಬೇಕು.
1. ಸೌತೆಕಾಯಿ:
ಇದು ಬೇಸಿಗೆಯ ಅತ್ಯುತ್ತಮ ತರಕಾರಿ. ಇದರಲ್ಲಿ ಸುಮಾರು 95% ನೀರಿನಾಂಶ ಇರುತ್ತದೆ. ಇದು ದೇಹವನ್ನು ತಂಪಾಗಿಸುವುದಲ್ಲದೆ, ಚರ್ಮದ ಆರೋಗ್ಯಕ್ಕೂ ಬಹಳ ಒಳ್ಳೆಯದು.
2. ಸೋರೆಕಾಯಿ:
ಸೋರೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ನಾರಿನಂಶ ಇರುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3. ಹೀರೆಕಾಯಿ: ಹೀರೆಕಾಯಿ ರಕ್ತವನ್ನು ಶುದ್ಧೀಕರಿಸಲು ಮತ್ತು ಲಿವರ್ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಕ್ಯಾಲೊರಿ ಕಡಿಮೆ ಇರುವುದರಿಂದ ತೂಕ ಇಳಿಸುವವರಿಗೂ ಇದು ಹೇಳಿ ಮಾಡಿಸಿದ ತರಕಾರಿ.
4. ಹಾಗಲಕಾಯಿ: ಬೇಸಿಗೆಯಲ್ಲಿ ಚರ್ಮದ ಅಲರ್ಜಿ ಮತ್ತು ಗುಳ್ಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಾಗಲಕಾಯಿ ರಕ್ತವನ್ನು ಶುದ್ಧೀಕರಿಸಿ ಇಂತಹ ಸಮಸ್ಯೆಗಳನ್ನು ತಡೆಯುತ್ತದೆ. ಇದು ಮಧುಮೇಹಿಗಳಿಗೂ ಉತ್ತಮ.
5. ಕುಂಬಳಕಾಯಿ:ಕುಂಬಳಕಾಯಿಯಲ್ಲಿ ವಿಟಮಿನ್ 'ಎ' ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಲವಲವಿಕೆ ನೀಡುತ್ತದೆ.
6. ಬೆಂಡೆಕಾಯಿ: ಬೆಂಡೆಕಾಯಿಯಲ್ಲಿರುವ 'ಪೆಕ್ಟಿನ್' ಎಂಬ ಅಂಶವು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.