ರಾಜ್ಯದಲ್ಲಿ ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಿರುತ್ತದೆ.
ಈ ಬದಲಾವಣೆಗಳನ್ನು ಎದುರಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು.
ಬಿಸಿಲಿಗೆ ಮೈಯಿಂದ ಬೆವರು ಹೆಚ್ಚು ಹೋಗುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚು ನೀರು ಕುಡಿಯಿರಿ. ಇನ್ನೂ ಬಾಯಾರಿಕೆ ಆಗದಿದ್ದರೂ ದಿನಕ್ಕೆ ಕನಿಷ್ಠ ೩-೪ ಲೀಟರ್ ನೀರು ಕುಡಿಯಿರಿ.
ನೈಸರ್ಗಿಕ ಪಾನೀಯಗಳು: ಎಳನೀರು, ಮಜ್ಜಿಗೆ, ನಿಂಬೆ ಹಣ್ಣಿನ ರಸ ಮತ್ತು ಮನೆಯಲ್ಲಿ ಮಾಡಿದ ಹಣ್ಣಿನ ಜ್ಯೂಸ್‌ಗಳು ಉತ್ತಮ.
ಸಕ್ಕರೆ ಅಂಶವಿರುವ ಪಾನೀಯ ಬೇಡ: ಅತಿಯಾದ ಕಾಫಿ, ಟೀ ಅಥವಾ ಸೋಡಾ ಸೇವನೆ ದೇಹವನ್ನು ಮತ್ತಷ್ಟು ನಿರ್ಜಲೀಕರಣಗೊಳಿಸುತ್ತದೆ.