ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

Sampriya

ಸೋಮವಾರ, 16 ಮಾರ್ಚ್ 2026 (16:23 IST)
Photo Credit X
ಜಾರ್ಖಂಡ್: ಮದುವೆ ಊಟದ ವೇಳೆ ರಸಗುಲ್ಲಾ ಸೇವಿಸುವಾಗ ಅದು ಗಂಟಲಿನಲ್ಲಿ ಸಿಲುಕಿದ ಪರಿಣಾಮ 41 ವರ್ಷದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಮೃತಪಟ್ಟ ಜಾರ್ಖಂಡ್‌ನ ಜಂಶೆಡ್‌ಪುರದಲ್ಲಿ ಸೋಮವಾರ ನಡೆದಿದೆ. 

ಮಲಿಯಾಂತ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಲಲಿತ್ ಸಿಂಗ್ ಎಂಬುವವರು ಪಾಲ್ಗೊಂಡಿದ್ದರು. ಭೋಜನದ ಸಮಯದಲ್ಲಿ ರಸಗುಲ್ಲಾ ಸವಿಯುತ್ತಿದ್ದಾಗ, ಅದು ಅಚಾನಕ್ಕಾಗಿ ಅವರ ಶ್ವಾಸನಾಳದಲ್ಲಿ ಸಿಲುಕಿಕೊಂಡಿದೆ. 

ಈ ವೇಳೆ ಲಲಿತ್ ಸಿಂಗ್ ಅವರು ತೀವ್ರ ಉಸಿರಾಟದ ಸಮಸ್ಯೆಯನ್ನು ಎದುರಿಸಿದರು. ಸುತ್ತಲಿದ್ದವರು ತಕ್ಷಣವೇ ಸಿಹಿಯನ್ನು ಹೊರತೆಗೆಯಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಕೂಡಲೇ ಅವರನ್ನು ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ರಸಗೊಲ್ಲಾ ಶ್ವಾವೈದ್ಯರ ಮಾಹಿತಿಸನಾಳವನ್ನು ಸಂಪೂರ್ಣವಾಗಿ ಮುಚ್ಚಿದ್ದರಿಂದ ದೇಹಕ್ಕೆ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿತ್ತು. ಕೆಲವೇ ನಿಮಿಷಗಳಲ್ಲಿ ಮಿದುಳಿಗೆ ಆಮ್ಲಜನಕ ತಲುಪದ ಕಾರಣ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಿಂಗ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ