ಇರಾನ್ ಗೆ ಯುದ್ಧ ಪರಿಕರ ಒದಗಿಸುವ ರಾಷ್ಟ್ರಗಳಿಗೆ ಟ್ರಂಪ್ ಹೊಸ ಬೆದರಿಕೆ

Krishnaveni K

ಬುಧವಾರ, 8 ಏಪ್ರಿಲ್ 2026 (17:28 IST)
Photo Credit: Instagram
ವಾಷಿಂಗ್ಟನ್: ಇರಾನ್ ಗೆ ಯುದ್ಧ ಪರಿಕರಗಳನ್ನು ಒದಗಿಸುವ ರಾಷ್ಟ್ರಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಬೆದರಿಕೆ ಹಾಕಿದ್ದಾರೆ. ಕದನ ವಿರಾಮ ಘೋಷಣೆ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಇಸ್ರೇಲ್ ಜೊತೆಗೆ ಸೇರಿಕೊಂಡು ಇರಾನ್ ಮೇಲೆ ಯುದ್ಧ ಸಾರಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿನ್ನೆ ಹೊರ್ಮುಜ್ ಜಲಸಂಧಿ ತೆರೆಯಲು ಇರಾನ್ ಒಪ್ಪಿದ ಬೆನ್ನಲ್ಲೇ ಕದನ ವಿರಾಮ ಘೋಷಿಸಿದ್ದರು. ಇದರ ಬೆನ್ನಲ್ಲೇ ಈಗ ಇರಾನ್ ಗೆ ಸಹಾಯ ಮಾಡುತ್ತಿರುವ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ್ದಾರೆ.

ಇರಾನ್ ಗೆ ಯುದ್ಧಪರಿಕರಗಳನ್ನು ನೀಡಿ ಯಾವೆಲ್ಲಾ ರಾಷ್ಟ್ರಗಳು ಸಹಾಯ ಮಾಡುತ್ತಿವೆಯೋ ಆ ಎಲ್ಲಾ ರಾಷ್ಟ್ರಗಳಿಗೆ ಈಗಿನಿಂದಲೇ ಜಾರಿಯಾಗುವಂತೆ ಎಲ್ಲಾ ಸರಕು, ಸಾಮಗ್ರಿಗಳ ಮೇಲೆ 50% ಟಾರಿಫ್ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ.

ತಮ್ಮ ಈ ನಿಯಮದಲ್ಲಿ ಯಾವ ರಾಷ್ಟ್ರಗಳಿಗೂ, ಸರಕುಗಳಿಗೂ ಯಾವುದೇ ವಿನಾಯ್ತಿ ಇಲ್ಲ ಎಂದು ಟ್ರಂಪ್ ಘೋಷಿಸಿದ್ದಾರೆ. ಇರಾನ್ ನಲ್ಲಿರುವ ಅಣ್ವಸ್ತ್ರ ತಯಾರಿಕೆಗೆ ಬಳಸುತ್ತಿದ್ದ ನ್ಯೂಕ್ಲಿಯರ್ ಕಣಗಳನ್ನು ಅಮೆರಿಕಾ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ