ರಕ್ತ ಚಂದಿರನಾಗಲಿದ್ದಾನೆ ಹುಣ್ಣಿಮೆ ಚಂದಿರ

ಭಾನುವಾರ, 27 ಸೆಪ್ಟಂಬರ್ 2015 (14:54 IST)
ಭಾನುವಾರ ಹಾಗೂ ಸೋಮವಾರ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದ್ದು, ಹುಣ್ಣಿವೆ ಚಂದಿರ ರಕ್ತ ಚಂದಿರನಾಗಿ ಗೋಚರಿಸಲಿದ್ದಾನೆ. ವಿಶ್ವದ ಕೆಲ ಭಾಗಗಳಲ್ಲಿ ಸೆಪ್ಟೆಂಬರ್ 27ಕ್ಕೆ ಗ್ರಹಣ ನಡೆದರೆ ಹಲವೆಡೆ ಸೆಪ್ಟೆಂಬರ್ 28ಕ್ಕೆ ಕಂಡುಬರಲಿದೆ. 1982ರ ಬಳಿಕ ಮತ್ತೆ ಕಾಣಿಸಿಕೊಳ್ಳಲಿರುವ ಕೆಂಪು ಚಂದ್ರ ಕೌತುಕತೆಗೆ ಕಾರಣನಾಗಿದ್ದಾನೆ. 
ಬ್ಲಡ್ ಮೂನ್ ಎಂದೇ ಪರಿಗಣಿಸಲ್ಪಟ್ಟಿರುವ ಈ ಗ್ರಹಣ ಇಂದು ಮಧ್ಯರಾತ್ರಿ ನಡೆಯಲಿದೆ. ಚಂದ್ರ ಇಂದು ಭೂಮಿಯ ಸಮೀಪಕ್ಕೆ ಬರಲಿದ್ದು, ಗ್ರಹಣದ ಸಂದರ್ಭದಲ್ಲಿ ಎಂದಿಗಿಂತ ದೊಡ್ಡದಾಗಿ ಹಾಗೂ ಕೆಂಪಗಾಗಿ ಗೋಚರಿಸಲಿದ್ದಾನೆ. ವಾಸ್ತವವಾಗಿ ಚಂದ್ರನ ಆಕಾರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾದ ವಿಜ್ಞಾನಿ ನೋವಾಹ್ ಪೆಟ್ರೊ ಸ್ಪಷ್ಟ ಪಡಿಸಿದ್ದಾರೆ. 
 
ಈ ಅಪರೂಪದ ‘ ಚಂದ್ರಗ್ರಹಣ’ ಭಾರತದಲ್ಲಿ ಗೋಚರಿಸುವುದಿಲ್ಲ. ಈ ಹಿಂದೆ 1982ರಲ್ಲಿ ಕಾಣಿಸಿಕೊಂಡಿದ್ದ ಕೆಂಪು ಚಂದಿರ ಮತ್ತೆ 2033ರವರೆಗೆ ಕಾಣಿಸಲಾರ. ಅಲ್ಲದೆ, ಈ ಗ್ರಹಣದ ಪರಿಣಾಮವಾಗಿ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿ ಸಾವು-ನೋವು ಉಂಟಾಗುವ ಸಾಧ್ಯತೆಯಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸುವ ಅಪಾಯವಿದೆ ಎಂದೂ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
 
ಈ ನೆತ್ತರ ಚಂದಿರನನ್ನು ಬರಿಗಣ್ಣಿನಲ್ಲೂ ನೋಡಬಹುದು ಎಂದು ನಾಸಾ ಸ್ಪಷ್ಟಪಡಿಸಿದೆ. 

ವೆಬ್ದುನಿಯಾವನ್ನು ಓದಿ