ಯುದ್ಧ ಮಾಡಿದ್ದು ಯಾಕೆ, ದಿಡೀರ್ ಕದನ ವಿರಾಮ ಯಾಕೆ: ಡೊನಾಲ್ಡ್ ಟ್ರಂಪ್ ವಿರುದ್ಧವೇ ತಿರುಗಿ ಬಿದ್ದ ಸಂಸದರು
ಇಸ್ರೇಲ್ ಆರಂಭಿಸಿದ್ದ ಯುದ್ಧಕ್ಕೆ ಅಮೆರಿಕಾ ಮೂಗು ತೂರಿಸಿತ್ತು. ಬಳಿಕ ಇದು ಇರಾನ್ ಮತ್ತು ಅಮೆರಿಕಾ ನಡುವಿನ ಯುದ್ಧವಾಗಿ ಮಾರ್ಪಟ್ಟಿತು. ಪರಿಣಾಮ ಅಮೆರಿಕಾ ಬೆಂಬಲಿಸುವ ರಾಷ್ಟ್ರಗಳ ಮೇಲೆಲ್ಲಾ ಇರಾನ್ ದಾಳಿ ಮಾಡಿತು.
ಇರಾನ್-ಇಸ್ರೇಲ್ ನಡುವಿನ ಯುದ್ಧದಲ್ಲಿ ಮೂಗು ತೂರಿಸಿದ್ದಕ್ಕೆ ಅಮೆರಿಕಾದಲ್ಲೇ ಅಸಮಾಧಾನದ ಅಲೆ ಎದ್ದಿತ್ತು. ಯಾರದ್ದೋ ಯುದ್ಧದಲ್ಲಿ ನಮ್ಮ ಸೈನಿಕರನ್ನು ಯಾಕೆ ಬಲಿಕೊಡುತ್ತೀರಿ ಎಂದು ಅಲ್ಲಿನ ಡೆಮಾಕ್ರಾಟಿಕ್ ಪಕ್ಷ ಆಕ್ರೋಶ ವ್ಯಕ್ತಪಡಿಸಿತ್ತು.
ಇದರ ನಡುವೆ ಈಗ ಕದನ ವಿರಾಮ ಘೋಷಿಸಿದ ಮೇಲೆ ಅಲ್ಲಿನ ಸಂಸದರು ಟ್ರಂಪ್ ವಿರುದ್ಧ ಕಿಡಿ ಕಾರಿದ್ದಾರೆ. ಇರಾನ್ ವಿರುದ್ಧ ಯುದ್ಧ ಮಾಡಲು ಟ್ರಂಪ್ ಅಮೆರಿಕಾ ಸಂಸತ್ತಿನ ಒಪ್ಪಿಗೆ ಪಡೆಯಲಿಲ್ಲ. ಅವರಾಗಿಯೇ ಯುದ್ಧ ಮಾಡಲು ತೀರ್ಮಾನಿಸಿದರು. ಈಗ ಅವರಾಗಿಯೇ ಕದನ ವಿರಾಮಕ್ಕೆ ಒಪ್ಪಿದ್ದಾರೆ. ಹೀಗಾಗಿ ಟ್ರಂಪ್ ವಿರುದ್ಧ ತನಿಖೆಯಾಗಬೇಕು ಎಂದು ಅಲ್ಲಿನ ಸಂಸದರು ಆಗ್ರಹಿಸಿದ್ದಾರೆ.