ಇಸ್ರೇಲ್ ಪ್ರಧಾನಿ ನೆತನ್ಯಾಹು ಇರಾನ್ ದಾಳಿಗೆ ಬಲಿಯಾಗಿದ್ದಾರಾ ಕಾಫಿ ಸೇವಿಸುವ ವಿಡಿಯೋ ನಕಲಿಯಾ Video
ಇಸ್ರೇಲ್-ಅಮೆರಿಕಾ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಇಸ್ರೇಲ್-ಅಮೆರಿಕಾ ನಡೆಸಿದ್ದ ದಾಳಿಗೆ ಇರಾನ್ ಪರಮೋಚ್ಛ ನಾಯಕ ಖಮೇನಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಈಗ ಇಸ್ರೇಲ್ ಪ್ರಧಾನಿ ನೆತನ್ಯಾಹು ಕೂಡಾ ಇರಾನ್ ದಾಳಿಗೆ ಸಾವನ್ನಪ್ಪಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ.
ಇದರ ಬೆನ್ನಲ್ಲೇ ಇಸ್ರೇಲ್ ಅಧಿಕೃತ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೋದಲ್ಲಿ ನೆತನ್ಯಾಹು ಕಾಫಿ ಶಾಪ್ ಒಂದರಲ್ಲಿ ಕಾಫಿ ಸೇವಿಸುತ್ತಿದ್ದಾರೆ. ಆದರೆ ಈ ವಿಡಿಯೋವನ್ನೂ ಎಐ ವಿಡಿಯೋ ಎಂದು ನೆಟ್ಟಿಗರು ವಿಶ್ಲೇಷಿಸಿದ್ದಾರೆ.
ನೆತನ್ಯಾಹು ಕಾಫಿ ಪಡೆಯುವಾಗ ಲೋಟದಲ್ಲಿ ಎಷ್ಟು ಕಾಫಿಯಿತ್ತೋ ಒಂದು ಸಿಪ್ ಕುಡಿದ ಮೇಲೂ ಲೋಟದಲ್ಲಿ ಅಷ್ಟೇ ಕಾಫಿಯಿದೆ. ಇನ್ನು, ಇಸ್ರೇಲ್ ಪ್ರಧಾನಿಗೆ ಒಂದು ಕೈಯಲ್ಲಿ ಆರು ಬೆರಳುಗಳಿವೆ. ಆದರೆ ಇದರಲ್ಲಿ ಐದು ಬೆರಳು ಮಾತ್ರ ಕಾಣಿಸುತ್ತಿದೆ ಎಂದು ನೆಟ್ಟಿಗರು ವಿಶ್ಲೇಷಿಸಿದ್ದಾರೆ.