ಪಾಕಿಸ್ತಾನದ ಸೇನಾಧಿಕಾರಿಯೋ, ಬೀದಿ ಕಾಮಣ್ಣನೋ..: ಮಹಿಳಾ ಪತ್ರಕರ್ತೆಗೆ ಪಬ್ಲಿಕ್ ನಲ್ಲಿ ಮಾಡಿದ್ದೇನು video

Krishnaveni K

ಬುಧವಾರ, 10 ಡಿಸೆಂಬರ್ 2025 (12:25 IST)
Photo Credit: X
ಇಸ್ಲಾಮಾಬಾದ್: ಇವನೇನು ಪಾಕಿಸ್ತಾನದ ಸೇನಾ ವಕ್ತಾರನೋ ಬೀದಿ ಕಾಮಣ್ಣನೋ ಎಂಬ ರೀತಿ ಪಾಕ್ ಸೇನಾ ಅಧಿಕಾರಿ ಜನರಲ್ ಅಹ್ಮದ್ ಷರೀಫ್ ಚೌಧರಿ ವರ್ತಿಸಿದ್ದಾನೆ.

ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರೀ ಟೀಕೆ ವ್ಯಕ್ತವಾಗಿದೆ. ಪಾಕಿಸ್ತಾನದ ಮಹಿಳಾ ಪತ್ರಕರ್ತೆಯೊಬ್ಬರಿಗೆ ಪತ್ರಿಕಾಗೋಷ್ಠಿಯಲ್ಲೇ ಕಣ್ಣು ಮಿಟುಕಿಸಿ ಅಹ್ಮದ್ ಷರೀಫ್ ಟೀಕೆಗೆ ಗುರಿಯಾಗಿದ್ದಾನೆ.

ಪತ್ರಕರ್ತೆ ಅಬ್ಸಾ ಕೋಮನ್ ಎಂಬಾಕೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಗ್ಗೆ ಷರೀಫ್ ಗೆ ಪ್ರಶ್ನೆ ಕೇಳುತ್ತಾರೆ. ಈ ವೇಳೆ ಆಕೆ ಪ್ರಶ್ನೆಗೆ ಉತ್ತರಿಸುವ ಷರೀಫ್ ಕೊನೆಯಲ್ಲಿ ಕಣ್ಣು ಮಿಟುಕಿಸಿ ನಗುತ್ತಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಈತನಿಗೆ ಸ್ವಲ್ಪವೂ ನಾಚಿಕೆ ಎಂಬುದು ಇಲ್ವೇ? ಒಬ್ಬ ಸೇನಾಧಿಕಾರಿಯಾಗಿದ್ದುಕೊಂಡು ಪಬ್ಲಿಕ್ ಆಗಿ ಒಬ್ಬ ಮಹಿಳೆ ಜೊತೆ ಈ ರೀತಿ ವರ್ತಿಸುವುದೇ ಎಂದು ಕಿಡಿ ಕಾರಿದ್ದಾರೆ.

शर्मनाक, पाकिस्तान सेना के प्रवक्ता अहमद शरीफ चौधरी ने प्रेस ब्रीफिंग के दौरान महिला पत्रकार को इमरान खान से जुड़े सवाल पर आंख मारी.... pic.twitter.com/bENl5YZxyY

— Dinesh Dangi (@dineshdangi84) December 10, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ