ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 3000 ರೂ., ಭಾರತದಲ್ಲಿ ಕೇವಲ 100 ರೂ. ಅಂದರೆ ಅವರಿಗಿಂತ ನಾವೇ ಶ್ರೀಮಂತರು ಎಂದು ಪತ್ರಕರ್ತರೊಬ್ಬರ ಜೊತೆ ವಾದ ಮಂಡಿಸುತ್ತಿರುವ ಈ ಪಾಕಿಸ್ತಾನಿಯನ ತಲೆಗೆ ಅದೇನು ಪ್ರೈಸ್ ಕೊಡಬೇಕು ನೀವೇ ಹೇಳಿ.
ಇಸ್ರೇಲ್, ಅಮೆರಿಕಾ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಭಾರತ, ಪಾಕಿಸ್ತಾನ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದೆ. ಹಾಗಿದ್ದರೂ ಭಾರತ ಸರ್ಕಾರ ತನ್ನ ರಾಜತಾಂತ್ರಿಕ ಬಲದಿಂದ ದೇಶದ ಜನರಿಗೆ ತೊಂದರೆಯಾಗದಂತೆ ನೋಡಿಕೊಂಡಿದೆ.
ಆದರೆ ಮೊದಲೇ ಭಿಕ್ಷೆ ಬೇಡುವ ಸ್ಥಿತಿಯಲ್ಲಿರುವ ನೆರೆಯ ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್ ಬೆಲೆ ಪ್ರತೀ ಲೀಟರ್ ಗೆ 450 ರೂ. ತಲುಪಿದೆ. ಇದರ ಬಗ್ಗೆ ಸಂದರ್ಶಕಿಯೊಬ್ಬರು ಅಲ್ಲಿನ ನಾಗರಿಕರನ್ನುಮಾತನಾಡಿಸಿದ್ದಾಳೆ.
ಈ ವೇಳೆ ಪಾಕ್ ಪ್ರಜೆಯೊಬ್ಬ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ 3000 ರೂ.,ಆದರೆ ಭಾರತದಲ್ಲಿ 100 ರೂ. ಅಂದರೆ ನಾವೇ ಅವರಿಗಿಂತ ಶ್ರೀಮಂತರು ಎನ್ನುತ್ತಾನೆ. ಇದಕ್ಕೆ ಶಾಕ್ ಆಗುವ ಸಂದರ್ಶಕಿ ಏನು ಹೇಳುತ್ತಿದ್ದೀರಿ ನೀವು, ಭಾರತದಲ್ಲಿ ಪೆಟ್ರೋಲ್ ಬೆಲೆ ನಮಗಿಂತಲೂ ಕಡಿಮೆ ಎನ್ನುತ್ತಾರೆ.
ಅದಕ್ಕೆ ಆತ ಮತ್ತೆ ಭಾರತದವರು ಭಿಕ್ಷೆ ಬೇಡುತ್ತಿದ್ದಾರೆ ಎನ್ನುತ್ತಾನೆ. ಇದನ್ನು ತಡೆಯುವ ಸಂದರ್ಶಕಿ ಭಾರತ ಭಿಕ್ಷೆ ಬೇಡುತ್ತಿಲ್ಲ, ಅವರ ಖಜಾನೆಯಲ್ಲಿ ಎಷ್ಟು ದುಡ್ಡಿದೆ ಗೊತ್ತಾ? ಅವರು ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಎಲ್ಲಾ ದೇಶಕ್ಕೂ ದುಡ್ಡುಕೊಡುತ್ತಾರೆ ಎನ್ನುತ್ತಾರೆ. ಇದಕ್ಕೆ ಪಾಕ್ ಪ್ರಜೆ ನಾವು ಇಮ್ರಾನ್ ಖಾನ್ ಕಾಲದಲ್ಲಿ ಭಿಕ್ಷೆ ಬೇಡಿರಬಹುದು. ಆದರೆ ಈಗ ಹಾಗಲ್ಲ. ನಾವು ಅವರಿಗಿಂತ ಶ್ರೀಮಂತರು ಎನ್ನುತ್ತಾನೆ. ಈತನ ಬುದ್ಧಿವಂತಿಕೆಗೆ ಅಳಬೇಕೋ, ನಗಬೇಕೋ ನೀವೇ ಹೇಳಿ.