ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಮಿಲ್ಲರ್ ಎರಡನೇ ಅತೀ ವೇಗದ ಐಪಿಎಲ್ ಅರ್ಧಶತಕವನ್ನು ಬಾರಿಸಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಜಯಗಳಿಸುವುದಕ್ಕೆ ನೆರವಾದರು. 19ನೇ ಓವರಿನಲ್ಲಿ ಫಾಕನರ್ ಬೌಲಿಂಗ್ನಲ್ಲಿ ಅವರ ಸಿಕ್ಸರ್ 19 ಎಸೆತಗಳಲ್ಲಿ ಅವರ ಅರ್ಧಶತಕವನ್ನು ತಂದುಕೊಟ್ಟಿತು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ರಾಯಲ್ಸ್ ಪರ ಅಭಿಷೇಕ್ ನಾಯರ್ 23 ರನ್ ಮತ್ತು ಸಂಜು ಸ್ಯಾಮ್ಸನ್ 52ರನ್ ಶೇನ್ ವ್ಯಾಟ್ಸನ್ 50 ರನ್ ಬಾರಿಸಿ 191 ರನ್ಗೆ 5 ವಿಕೆಟ್ ಕಳೆದುಕೊಂಡಿತ್ತು.