ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಇಂದು ಮತ್ತೆ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬರುತ್ತಿದೆ. ಇಂದು ಹೊಸ ಅಡಿಕೆ ಬೆಲೆ 5 ರೂ. ಏರಿಕೆಯಾಗಿದ್ದು 485 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 550 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 550 ರೂ.ಗಳಷ್ಟಾಗಿದೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲಿ ಇಂದು ಯಾವುದೇ ಏರಿಕೆ, ಇಳಿಕೆಯಾಗಿಲ್ಲ. ಹೊಸ ಪಟೋರ 415 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 430 ರೂ.ಗಳಷ್ಟಿದೆ. ಹೊಸ ಉಳ್ಳಿ ದರ ಇಂದು 280 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ 290 ರೂ.ಗಳಾಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು 15 ರೂ. ಇಳಿಕೆಯಾಗಿದ್ದು 685 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು 5 ರೂ. ಇಳಿಕೆಯಾಗಿದ್ದು 215 ರೂ.ಗಳಷ್ಟಾಗಿದೆ.