Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

Krishnaveni K

ಬುಧವಾರ, 18 ಫೆಬ್ರವರಿ 2026 (12:36 IST)
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ನಿನ್ನೆ ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಏರಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
 

ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಮತ್ತೆ ಅಡಿಕೆ ಬೆಲೆಯಲ್ಲಿ ಚೇತರಿಕೆ ಕಂಡುಬರುತ್ತಿದೆ. ಆದರೆ ಇಂದು ಯಥಾ ಸ್ಥಿತಿಯಲ್ಲಿದೆ. ಇಂದು ಹೊಸ ಅಡಿಕೆ ಬೆಲೆ 485 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 550 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ 550 ರೂ.ಗಳಷ್ಟಾಗಿದೆ.

ಹೊಸ ಪಟೋರ  ದರ ಮತ್ತು ಹಳೆ ಪಟೋರ ದರದಲ್ಲಿ ಇಂದು ಯಾವುದೇ ಏರಿಕೆ, ಇಳಿಕೆಯಾಗಿಲ್ಲ. ಹೊಸ ಪಟೋರ 415 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 430 ರೂ.ಗಳಷ್ಟಿದೆ.  ಹೊಸ ಉಳ್ಳಿ ದರ ಇಂದು  280 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ 290 ರೂ.ಗಳಾಗಿದೆ.

ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು 5 ರೂ. ಇಳಿಕೆಯಾಗಿದ್ದು 675 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು 5 ರೂ. ಇಳಿಕೆಯಾಗಿದ್ದು 210 ರೂ.ಗಳಷ್ಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ