ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಯಥಾಸ್ಥಿತಿಯಲ್ಲಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ದಾಖಲೆಯ ಏರಿಕೆ ಕಂಡಿತ್ತು. ಈ ವಾರ ಅದೇ ರೀತಿ ಬೆಲೆ ಏರಿಳಿಕೆಯಾಗುವ ಲಕ್ಷಣವಿದೆ. ಇಂದು ಪರಿಶುದ್ಧ ಚಿನ್ನದ ದರ ಇಂದು ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,59,310.00 ರೂ.ಗಳಿತ್ತು. ಇಂದೂ 1,56,655.00 ರೂ.ಗಳಷ್ಟಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಗಳು ಇಂದು ಯಥಾಸ್ಥಿತಿಯಲ್ಲಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 15,491 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 14,200 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 11,618 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಏರಿಕೆ-ಇಳಿಕೆಯಾಗುತ್ತಲೇ ಇದೆ. ಇಂದು ಬೆಳ್ಳಿ ದರ ಇಂದು 5000 ರೂ. ಇಳಿಕೆಯಾಗಿದೆ. ಇಂದು ಪ್ರತೀ ಕೆ.ಜಿಗೆ ಬೆಳ್ಳಿ ದರ 2,55,000 ರೂ. ಗಳಷ್ಟಿದೆ.