ಚಿತ್ರೀಕರಣದ ವೇಳೆ ಸ್ಟಂಟ್ ಮ್ಯಾನ್‌ಗೆ ಅಗ್ನಿ ಅಪಘಾತ

ಗುರುವಾರ, 27 ಆಗಸ್ಟ್ 2015 (10:07 IST)
ಸ್ಟಂಟ್ ಮ್ಯಾನ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ತಮ್ಮ ಸಿನಿಮಾಗಳ ಸ್ಟಂಟ್ ದೃಶ್ಯಗಳಲ್ಲಿ ಡೂಪ್ ಇಲ್ಲದೆ ಆಕ್ಟ್ ಮಾಡೋ ಅಕ್ಷಯ್ ಗೆ ಚಿಕ್ಕದೊಂದು ಫೈರ್ ಆಕ್ಸಿಡೆಂಟ್ ಆಗಿದೆ. ತೆರೆಗೆ ಸಿದ್ಧವಾಗಿರೋ ಸಿನಿಮಾ ಸಿಂಗ್ ಈಸ್ ಬ್ಲಿಂಗ್ ಚಿತ್ರದ ಸಾಂಗ್ ಶೂಟಿಂಗ್ ನಲ್ಲಿ ಅಕ್ಷಯ್ ಕಾಲಿಗೆ ಬೆಂಕಿ ಹೊತ್ತಿಕೊಂಡಿತ್ತು. ತುಂಗ್ ತುಂಗ್ ಭಜೆ ಹಾಡಿನ ಚಿತ್ರೀಕರಣದ ಸಮಯದಲ್ಲಿ ಅಕ್ಷಯ್ ಕಾಲಿಗೆ ಬೆಂಕಿ ಹೊತ್ತಿಕೊಂಡಿತ್ತು. ಆದ್ರೆ ಯಾವುದೇ ಮೇಜರ್ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ
    

 
ತುಂಗ್ ತುಂಗ್ ಭಜೆ ಹಾಡಿನ ಚಿತ್ರೀಕರಣದಲ್ಲಿ ಅಕ್ಷಯ್ ಕುಮಾರ್ ಬೆಂಕಿಯ ರಿಂಗ್ ನಲ್ಲಿ ಡ್ಯಾನ್ಸ್ ಮಾಡೋ ದೃಶ್ಯವನ್ನ ಚಿತ್ರೀಕರಿಸಲಾಗ್ತಿತ್ತು. ಆಗ ಅಕ್ಷಯ್ ಕುಮಾರ್ ಕಾಲು ಬೆಂಕಿಯಿದ್ದ ರಿಂಗ್ ನಲ್ಲಿ ಸಿಲುಕಿಕೊಂಡಿತ್ತು. ಕೆಲಹೊತ್ತು ಕಾಲು ಅಲ್ಲೇ ಸ್ಟ್ರಕ್ ಆದ ಕಾರಣ ಕಾಲಿಗೆ ಸಣ್ಣಪುಟ್ಟ ಗಾಯವಾಗಿತ್ತು. ತಕ್ಷಣವೇ ಸೆಟ್ ನಲ್ಲಿದ್ದ ಸಿಬ್ಬಂದಿಗಳು ರಿಂಗ್ ನ ಬೆಂಕಿಯಾರಿಸಲು ಯಶಸ್ವಿಯಾಗಿದ್ದಾರೆ.
 
ಸೆಟ್ ನಲ್ಲಿ ನಡೆದ ಅವಘಡದ ಬಗ್ಗೆ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ. ಟ್ವಿಟ್ ಮಾಡ್ತಿದ್ದ ಹಾಗೆ ಅಕ್ಷಯ್ ಫ್ಯಾನ್ ಆತಂಕ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ. ಆದ್ರೆ ಈ ಅವಘಡದಲ್ಲಿ ಅಕ್ಷಯ್ ಗೆ ಜಾಸ್ತಿ ಗಾಯಗಳಾಗದೆ ಬಚಾವಾಗಿದ್ದಾರೆ.

ವೆಬ್ದುನಿಯಾವನ್ನು ಓದಿ