ಧುರಂಧರ್‌ 2 ವಿಚಾರದಲ್ಲಿ ಕೊನೆಗೂ ಮೌನಮುರಿದ ದೀಪಿಕಾ ಪಡುಕೋಣೆ: ಟ್ರೋಲಿಗರಿಗೆ ಹೇಳಿದ್ದೇನು

Sampriya

ಬುಧವಾರ, 8 ಏಪ್ರಿಲ್ 2026 (21:24 IST)
Photo Courtesy X
ಬೆಂಗಳೂರು: ರಣವೀರ್ ಸಿಂಗ್ ಅವರ ಧುರಂಧರ ಸಿನಿಮಾ ಬಗ್ಗೆ ಮೌನವಾಗಿದ್ದಕ್ಕೆ ಟ್ರೋಲ್ ಮಾಡಿದವರಿಗೆ ಕೊನೆಗೂ ದೀಪಿಕಾ ಪಡುಕೋಣೆ ಪ್ರತಿಕ್ರಿಯೆ ನೀಡಿದ್ದಾರೆ.  

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ 2ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ದಾಖಲೆಗಳನ್ನು ಮಾಡಿದೆ. ಅನೇಕ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಈ ಸಿನಿಮಾವನ್ನು ಹೊಗಳಿದ್ದಾರೆ. 

ನೆಟ್ಟಿಗರೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್‌ ಹಾಕಿದ್ದರು. ದೀಪಿಕಾ ಪಡುಕೋಣೆ 500 ಕೋಟಿ ಬಜೆಟ್‌ನ ಚಿತ್ರಕ್ಕೆ ಸೈಲೆಂಟ್ ಟ್ರೀಟ್ಮೆಂಟ್ ನೀಡಿದ್ದಾರೆ. ಧುರಂಧರ್: ದಿ ರಿವೆಂಜ್ ಜಾಗತಿಕ ದಾಖಲೆಗಳನ್ನು ಮುರಿಯುತ್ತಿದ್ದರೆ, ಚಿತ್ರದ ಪ್ರೀಮಿಯರ್ ಹೋಗುವುದು ಬಿಟ್ಟು, ದೀಪಿಕಾ ತಮ್ಮ ಅತ್ತೆ-ಮಾವಂದಿರ ಜೊತೆ ಸಿತಾರ್ ಕಚೇರಿಗೆ ಹೋಗಿದ್ದರು. ಯಾವುದೇ ಪೋಸ್ಟ್ ಇಲ್ಲ, ಹೊಗಳಿಕೆಯೂ ಇಲ್ಲ, ಕೇವಲ ಮೌನ.. ಅವರು ನಿರ್ದೇಶಕರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆಯೇ ಅಥವಾ ಇಂಟರ್ನೆಟ್‌ನ ಈ ನಾಟಕಗಳಿಂದ ದೂರ ಉಳಿಯುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಲಾಗಿತ್ತು.

ಇದಕ್ಕೆ ಕಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯೆ ನೀಡಿದ ದೀಪಿಕಾ ಪಡುಕೋಣೆ, ಎರಡನೆಯದ್ದು ಗೆಳೆಯಾ (ನಾಟಕದಿಂದ ದೂರ ಉಳಿಯುವುದು). ನಿಮ್ಮೆಲ್ಲರಿಗಿಂತ ಮೊದಲೇ ನಾನು ಈ ಸಿನಿಮಾ ನೋಡಿದ್ದೇನೆ. ಈಗ ಯಾರು ಜೋಕರ್ ಆದರು ಎಂದು ಹೇಳುವ ಮೂಲಕ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ್ದಾರೆ. ಅಲ್ಲಿಗೆ, ಎಲ್ಲವನ್ನು ಸೋಶಿಯಲ್‌ ಮೀಡಿಯಾ ಮೂಲಕವೇ ಹೇಳಬೇಕು ಎಂಬ ನಿಯಮವಿಲ್ಲ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ.

ಈ ಹಿಂದೆ ಧುರಂದರ್‌ ಪಾರ್ಟ್‌ 1 ಬಂದಾಗ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಎಲ್ಲರೂ ಸಿನಿಮಾ ನೋಡುವಂತೆ ಕರೆ ನೀಡಿದ್ದರು. ಜೊತೆಗೆ ನಿರ್ದೇಶಕ ಆದಿತ್ಯ ಧರ್‌ ಸೇರಿದಂತೆ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಆದರೆ ಧುರಂದರ್‌ ಪಾರ್ಟ್‌ 2ರಿಲೀಸ್‌ ಆದಾಗಿನಿಂದ ಇದುವರೆಗೂ ದೀಪಿಕಾ ಪಡುಕೋಣೆ ಅವರು ಯಾವುದೇ ಪೋಸ್ಟ್‌ ಹಾಕಿರಲಿಲ್ಲ. ಆದರೆ ಇದೀಗ ದೀಪಿಕಾ ಪಡುಕೋಣೆ ನೀಡಿರುವ ಪ್ರತಿಕ್ರಿಯೆ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಂತಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ