ಯಶ್ ಮಾಸ್ಟರ್ ಪೀಸ್ ಸಿನಿಮಾದ ಹಾಡುಗಳು ಇವತ್ತು ರಿಲೀಸ್

ಶುಕ್ರವಾರ, 11 ಡಿಸೆಂಬರ್ 2015 (08:19 IST)
ಸ್ಯಾಂಡಲ್ ವುಡ್ ಅಭಿಮಾನಿಗಳಲ್ಲಿ ಸದ್ಯ ಸಾಕಷ್ಟು ಕುತೂಹಲಗಳನ್ನು ಹುಟ್ಟಿ ಹಾಕಿರುವ ಸಿನಿಮಾಗಳಲ್ಲಿ ಒಂದು ಯಶ್ ಅವರ ಮಾಸ್ಟರ್ ಪೀಸ್ ಸಿನಿಮಾ. ಕಳೆದ ವಾರ ಈ ಸಿನಿಮಾದ ಮೊದಲ ಹಾಡು ಅಣ್ಣಂಗೆ ಲವ್ ಆಗಿದೆ ಸಾಂಗ್ ಬಿಡುಗಡೆಯಾಗಿತ್ತು. ಇವತ್ತು ಸಿನಿಮಾದ ಉಳಿದ ನಾಲ್ಕು ಹಾಡುಗಳನ್ನು ಚಿತ್ರತಂಡ ಇವತ್ತು ರಿಲೀಸ್ ಮಾಡುತ್ತಿದೆ.


ಸಿನಿಮಾದ ಟೈಟಲ್ ಸಾಂಗ್ ಐ ಕಾಂಟ್ ವೈಟ್ ಬೇಬಿ ಹಾಡು ಇವತ್ತು ರಿಲೀಸ್ ಆಗುತ್ತಿದ್ದು, ಸಿನಿಮಾದ ನಾಯಕಿ ಶಾನ್ವಿ ಹಾಗೂ ಯಶ್ ನಡುವಿನ ರೋಮ್ಯಾಂಟಿಕ್ ಹಾಡು ಇದಾಗಿದ್ದು ಉಗ್ರಂ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಈ ಹಾಡಿಗೆ ಮೊದಲ ಬಾರಿಗೆ ಸಾಹಿತ್ಯ ಬರೆದಿದ್ದಾರೆ. ದುಬೈನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ.ಇರ್ಮಾನ್ ಸರ್ದಾರಿಯಾ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.ಇನ್ನೊಂದು ಹಾಡು ಕೆಡಿ ನಂಬರ್ 1 ಈ ಹಾಡಿಗೆ ಹರ್ಷ ನೃತ್ಯ ಸಂಯೋಜಿಸಿದ್ದಾರೆ.ಮಂಜು ಮಾಂಡವ್ಯ ಈ ಹಾಡನ್ನು ಬರೆದಿದ್ದಾರೆ. ಮತ್ತೊಂದು ಹಾಡು ಜಾಗೋರೆ ಜಾಗೋ ಹಾಡು ಈ ಹಾಡನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ನಟಿ ಸುಹಾಸಿನಿ ಹಾಗೂ ಯಶ್ ನಡುವಿನ ಹಾಡಿದೆ. ಕೊನೆಯ ಹಾಡು ಏಟೆಂಕ್ಷನ್ ಪ್ಲೀಸ್. ಈ ಹಾಡನ್ನು ನರ್ತನ್ ಬರೆದಿದ್ದು ಇದಕ್ಕೆ ಇಮ್ರಾನ್ ನೃತ್ಯ ಸಂಯೋಜಿಸಿದ್ದಾರೆ.ಈ ಎಲ್ಲಾ ಹಾಡುಗಳು ಇವತ್ತು ರಿಲೀಸ್ ಆಗುತ್ತಿವೆ.

 ಈಗಾಗಲೇ ಬಿಡುಗಡೆಯಾಗಿರುವ ಐ ಕಾಂಟ್ ವೈಟ್ ಬೇಬಿ ಹಾಡು ಯಶ್ ಅಭಿಮಾನಿಗಳಿಗೆ ಇಷ್ಟವಾಗಿದ್ದು ಇವತ್ತು ರಿಲೀಸ್ ಆಗುತ್ತಿರುವ ಉಳಿದ ನಾಸ್ಕು ಹಾಡುಗಳ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

ವೆಬ್ದುನಿಯಾವನ್ನು ಓದಿ