ಡಾ. ಶಿವರಾಜ್ ಕುಮಾರ್ ಅವರಿಗೆ ದೊರೆತ ಸಿಮಾ-2014 ಬೆಸ್ಟ್ ಆಕ್ಟರ್ ಅವಾರ್ಡ್ ..

ಮಂಗಳವಾರ, 16 ಸೆಪ್ಟಂಬರ್ 2014 (11:40 IST)
ಸಿಮಾ  ಕನ್ನಡ ಸಿನಿಮಾ ಪ್ರಶಸ್ತಿಗಳು ಪ್ರಕಟಗೊಂಡಿವೆ.  ಭಜರಂಗಿ ಚಿತ್ರದ ನಟನೆಗೆಂದು  ಡಾ. ಶಿವರಾಜ್ ಕುಮಾರ್ ಅವರಿಗೆ ಉತ್ತಮ ನಟ ಪ್ರಶಸ್ತಿ ದೊರೆತರೆ, ಅದೇ ಚಿತ್ರದ ನಟನೆಗೆ ಐಂದ್ರಿತಾ ರೇ ಗೇ ಬೆಸ್ಟ್ ನಟಿ ಎನ್ನುವ ಪ್ರಶಸ್ತಿ ದೊರಕಿದೆ. ಈ ಸಿನಿಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಯೂತ್ ಐಕಾನ್ ಅವಾರ್ಡ್ ದೊರೆತರೆ, ಮುದ್ದಾದ ಅಮೂಲ್ಯಾಗೆ ಬೆಸ್ಟ್ ಕ್ರಿಟಿಕ್ ಅವಾರ್ಡ್ ಶ್ರಾವಣಿ ಸುಬ್ರಮಣ್ಯ ಚಿತ್ರಕ್ಕೆ ದೊರಕಿದೆ. 
 
ಪವನ್ ವಡೆಯರ್ ಗೂಗ್ಲಿ ಚಿತ್ರದ ನಿರ್ದೇಶನಕ್ಕೆ ಉತ್ತಮ ನಿರ್ದೇಶಕ ಪ್ರಶಸ್ತಿ ಸಿಕ್ಕರೆ , ವಿ ಹರಿಕೃಷ್ಣ ಗೆ ಬುಲ್ ಬುಲ್ ಚಿತ್ರದ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ ಸಿಕ್ಕಿದೆ. ವೈದಿ ಅವರ ಛಾಯಾಗ್ರಹಣಕ್ಕೆ  ಗೂಗ್ಲಿ ಅವಾರ್ಡ್ ದೊರಕಿಸಿ ಕೊಟ್ಟಿದೆ. ಮದುವೆ ಮನೆಗೆ  ಚಿತ್ರದ ಉತ್ತಮ ಪೋಷಕ ನಟ  ಪ್ರಶಸ್ತಿ ಅವಿನಾಶ್ ದಿವಾಕರ್ , ಕಡ್ಡಿ ಪುಡಿ   ಚಿತ್ರದ ಬೆಸ್ಟ್ ಫೀಮೇಲ್ ಸಿಂಗರ್ ಅವಾರ್ಡ್ ವಾಣಿ ಹರಿಕೃಷ್ಣ, ಉತ್ತಮ ಹಾಡುಗಾರ ಪ್ರಶಸ್ತಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ  ಅವರಿಗೆ ಲಭ್ಯವಾಗಿದೆ. 

ವೆಬ್ದುನಿಯಾವನ್ನು ಓದಿ