ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್‌, ಹುಡುಗ ಯಾರು ಗೊತ್ತಾ

Sampriya

ಬುಧವಾರ, 8 ಏಪ್ರಿಲ್ 2026 (16:38 IST)
Photo Credit X
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದಲ್ಲಿ ಶೇಕ್ ಇಟ್ ಪುಷ್ಪವತಿ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ನಿಮಿಕಾ ರತ್ನಾಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ನಿಮಿಕಾ ರತ್ನಾಕರ್‌ಗೆ ಶೇಕ್ ಇಟ್ ಪುಷ್ಪವತಿ ಹಾಡು ಭಾರೀ ಮನ್ನಣೆಯನ್ನು ತಂದುಕೊಟ್ಟಿತ್ತು.  ಇವರು ಅಬ್ಬರ, ಮಿಸ್ಟರ ಬ್ಯಾಚುಲರ್, ಕ್ರಾಂತಿ, ಫ್ಲರ್ಟ್ ಸೇರಿದಂತೆ ಇನ್ನೂ ಕೆಲವು ಚಿತ್ರಗಳಲ್ಲಿ ನಿಮಿಕಾ ರತ್ನಾಕರ್ ಅಭಿನಯಿಸಿದ್ದಾರೆ. 

ಮಂಗಳೂರು ಮೂಲದ ನಿಮಿಕಾ ರತ್ನಾಕರ್ ಅವರು ಆಶಿಶ್ ಎಂಬವರನ್ನು ಕೈ ಹಿಡಿದಿದ್ದಾರೆ. ಇನ್ನೂ ಕುಟುಂಬ ಹಾಗೂ ಆಪ್ತ ಬಳಗದವರ ಸಮ್ಮುಖದಲ್ಲಿ ಮಂಗಳೂರಿನಲ್ಲೇ ಅದ್ದೂರಿಯಾಗಿ ಮದುವೆ ನಡೆಯಿತು. 

ಮದುವೆಯ ಫೋಟೋಗಳ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ