ತಂದೆ-ತಾಯಿಗಿಂತ ನನಗೆ ಬೇರಾರೂ ಹೆಚ್ಚಲ್ಲ: ಸಲ್ಮಾನ್

ಶನಿವಾರ, 7 ನವೆಂಬರ್ 2015 (09:39 IST)
ನಟ ಸಲ್ಮಾನ್ ಖಾನ್ ಇಂದಿನ ಯುವಕರ ಪಾಲಿಗೆ ಸ್ಟೈಲ್ ಐಕಾನ್. ಯುವತಿಯರ ಪಾಲಿಗೆ ನನ್ನ ಹುಡುಗ ಹೀಗೆ ಇಬರೇಕು ಅನ್ನೋ ಮಾಡೆಲ್. ಹೀಗೆ ನಾನಾ ಬಗೆಯಲ್ಲಿ ಅಭಿಮಾನಿಗಳ ಪ್ರೀತಿ ಪಾತ್ರರಾದವರು ಸಲ್ಮಾನ್ ಖಾನ್. ಆದ್ರೆ ಸಲ್ಲುನನ್ನು ಅಸಂಖ್ಯಾತ ಅಭಿಮಾನಿಗಳನ್ನು ಪ್ರೀತಿಸುತ್ತಿದ್ರೆ ಸಲ್ಮಾನ್ ಖಾನ್ ಗೆ ಮಾತ್ರ ತಾಯಿಯೇ ಹೆಚ್ಚು ಪ್ರೀತಿಯಂತೆ.
ಸಲ್ಲು ಅವರ ಜೀವನದಲ್ಲಿ ಅವರ ತಂದೆ ಹಾಗೂ ತಾಯಿಗೆ ವಿಶೇಷವಾದ ಸ್ಥಾನ ಮಾನ, ಗೌರವವಿದೆಯಂತೆ. ತಾಯಿ ಪ್ರತಿ ಕುಟುಂಬದ ಬಗ್ಗೆ ಕಾಳಜಿ ವಹಿಸುತ್ತಾಳೆ. ಹಾಗಾಗಿ ನಾನು ನನ್ನ ತಾಯಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ ಅಂತಾ ಸಲ್ಲು ಹೇಳಿದ್ದಾರೆ. ಹಾಗಾಗಿ ತೆರೆಯ ಮೇಲೆ ಸಲ್ಲು  ಒಬ್ಬ ಮಗನಾಗಿ ಎಷ್ಟು  ಸಮರ್ಥವಾಗಿ ಪಾತ್ರ ನಿರ್ವಹಿಸುತ್ತಾರೋ ಹಾಗೇ ನಿಜ ಜೀವನದಲ್ಲೂ ತಾಯಿಯನ್ನು ಹಾಗೇ ನೋಡಿಕೊಳ್ಳುತ್ತಾರಂತೆ.
 
ಇನ್ನು ಸಲ್ಲು ಹೇಳೋ ಪ್ರಕಾರ ಯಾರು ನಮ್ಮ ಮುಖದಲ್ಲಿ ನಗು ಮೂಡಿಸುತ್ತಾರೋ ನಾವು ಕೂಡ ಅವರ ಮುಖದಲ್ಲಿ ನಗು ತರಿಸಬೇಕಂತೆ. ಸದ್ಯ ಸಲ್ಲು ತಮ್ಮ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಅದಕ್ಕಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ ಸಲ್ಲು ಭಾಯಿ.
 

ವೆಬ್ದುನಿಯಾವನ್ನು ಓದಿ