'ಪ್ರಿಯಾಂಕ' ದಲ್ಲಿ ಪ್ರಿಯಾಂಕಾ ಉಪೇಂದ್ರ

ಶನಿವಾರ, 21 ಫೆಬ್ರವರಿ 2015 (09:50 IST)
ಪ್ರಿಯಾಂಕ ಉಪೇಂದ್ರ ಈಗ ತಮ್ಮ ಪತಿ ಉಪೇಂದ್ರ ನಟಿಸಿ ನಿರ್ದೇಶಿಸುತ್ತಿರುವ ಚಿತ್ರ ಉಪ್ಪಿ2 ನಿರ್ಮಾಣದ ವಿಷಯದಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಅದರ ನಡುವೆ ಅವರು ದಿನೇಶ್ ಬಾಬು ಅವರ ನಿರ್ದೇಶನದ ಚಿತ್ರದಲ್ಲಿ ನಟಿಸಲು ಸಹ ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಮತ್ತೆ ಬಣ್ಣ ಹಚ್ಚಲು ಪೂರಕ ಸಿದ್ಧತೆ ನಡೆಸಿದ್ದಾರೆ ಪ್ರಿಯಾಂಕ ಮೇಡಂ. ಮದುವೆ ಮಕ್ಕಳಾದ ಬಳಿಕ ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ, ಸಿನಿಮಾ ರಿಯಾಲಿಟಿ ಶೋಗಳಲ್ಲಿ ಕಂಡು ಬರುತ್ತಿದ್ದ ಪ್ರಿಯಾಂಕ ಈಗ ಮತ್ತೆ  ಬಣ್ಣ ಹಚ್ಚುತ್ತಿದ್ದಾರೆ. 
ಈ ಚಿತ್ರ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆಯಂತೆ. ಈ ಚಿತ್ರಕ್ಕೆ ಪ್ರಿಯಾಂಕ ಎನ್ನುವ ಹೆಸರನ್ನು ನೀಡಲಾಗಿದ್ದು, ಮಹಿಳಾ ಪ್ರಧಾನ ಚಿತ್ರವಾಗಿದೆಯಂತೆ. ಆದಕಾರಣ ಈ ಚಿತ್ರಕ್ಕೆ ಪ್ರಿಯಾಂಕ ಹೆಸರನ್ನು ನೀಡಲಾಗಿದೆಯಂತೆ. ಈಗ ಪ್ರಿಯಾಂಕ ಪತಿ ಉಪೇಂದ್ರ ಅವರ ಉಪ್ಪಿ ಬರ್ತಾ ಇದೆ. ಅದರ ಹಿಂದೆ ಪ್ರಿಯಾಂಕ. ಇನ್ನು ರಮ್ಯ, ರಕ್ಷಿತಾ ಸೇರಿದಂತೆ ಹಲವಾರು ಹೆಸರುಗಳು ಬಾಕಿ ಉಳಿದಿರುವುದರಿಂದ  ಹೆಸರಿನ ತೊಂದರೆ ಇಲ್ಲ ಬಿಡಿ. ಜೊತೆಗೆ ವಿವಾದವು ಸಹಿತ ಮಾಡಲು ಸಾಧ್ಯವಿಲ್ಲ. ಅಂದಂಗೆ ಈ ಮುದ್ದಾದ ಉಪ್ಪಿ ಶ್ರೀಮತಿ ನಟಿಸುತ್ತಿರುವ ಚಿತ್ರ ಸಂಪೂರ್ಣವಾಗಿ ಲವ್ ಬೇಸ್ಡ್ ಕಥೆಯನ್ನು ಹೊಂದಿದೆಯಂತೆ!

ವೆಬ್ದುನಿಯಾವನ್ನು ಓದಿ