ನೀರ್‌ದೋಸೆ ಚಿತ್ರದಿಂದ ರಮ್ಯ ಹೊರಹೋದ ಬಗ್ಗೆ ಜಗ್ಗೇಶ್ ಹೇಳಿದ್ದೇನು ಗೊತ್ತಾ?
ಶುಕ್ರವಾರ, 2 ಸೆಪ್ಟಂಬರ್ 2016 (14:32 IST)
ನೀರ್‌ದೋಸೆ ಚಿತ್ರದಿಂದ ಖ್ಯಾತ ನಟಿ ರಮ್ಯ ಹೊರಹೋಗಿ ತಪ್ಪು ಮಾಡಿದರು ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ನಗರದ ಮೇನಕಾ ಚಿಂದ್ರಮಂದಿರದಲ್ಲಿ ಚಿತ್ರ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, ಒಂದು ವೇಳೆ, ನೀರ್‌ದೋಸೆ ಚಿತ್ರದಲ್ಲಿ ರಮ್ಯ ನಟಿಸಿದ್ದಲ್ಲಿ 50 ವರ್ಷಗಳ ಕಾಲ ಜನತೆ ಆಕೆಯನ್ನು ದೇವತೆಯಂತೆ ಪರಿಗಣಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟರು.
ಆದರೆ, ರಮ್ಯ ಅವರ ದೌರ್ಭಾಗ್ಯವೋ ಏನೋ ಗೊತ್ತಿಲ್ಲ. ಅವರು ಚಿತ್ರದಿಂದ ಹೊರಬಂದರು ಎಂದು ವಿಷಾದ ವ್ಯಕ್ತಪಡಿಸಿದರು.
ನೀರ್‌ದೋಸೆ, ಚಿತ್ರ ನೋಡುವಾಗ 4-5 ಬಾರಿ ಕಣ್ಣಲ್ಲಿ ನೀರು ಬಂತು ರಾಜ್ಯದಾದ್ಯಂತ ಬಂದ್ ಆಚರಿಸುತ್ತಿರುವಾಗ ಚಿತ್ರಕ್ಕೆ ಅಭಿಮಾನಿಗಳ ತೋರಿದ ಭರ್ಜರಿ ಪ್ರತಿಕ್ರಿಯೆ ನೋಡಿ ಸಂತಸವಾಗಿದೆ ಎಂದು ನಟ ಜಗ್ಗೇಶ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ