ನಟ ದರ್ಶನ್ ಅಭಿಮಾನಿಗಳ ನಡವಳಿಕೆಗೆ ವೇದಿಕೆಯಿಂದಲೇ ಕೆಳಗಿಳಿದ ರಚಿತಾ ರಾಮ್‌

Sampriya

ಶನಿವಾರ, 1 ನವೆಂಬರ್ 2025 (19:15 IST)
Photo Credit X
ನಟ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ನಡವಳಿಕೆಗೆ ಬೇಸರಗೊಂಡು ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್‌ ವೇದಿಕೆಯಿಂದ ಇಳಿದು ಹೋದ ಘಟನೆ ನಡೆದಿದೆ. ದುನಿಯಾ ವಿಜಯ್ ಜತೆಗೆನೆ ನಟಿಸಿರುವ ಲ್ಯಾಂಡ್‌ಲಾರ್ಡ್‌ ಸಿನಿಮಾ ಟೀಸರ್ ಲಾಂಚ್ ಇವೆಂಟ್‌ ಈ ಘಟನೆ ನಡೆದಿದೆ. 

ರಚಿತಾ ಅವರು ವೇದಿಕೆ ಹತ್ತುತ್ತಿದ್ದ ಹಾಗೇ ದರ್ಶನ್ ಫ್ಯಾನ್ಸ್‌ ಡಿ ಬಾಸ್ ಡಿಬಾಸ್ ಎಂದು ಕೂಗಲು ಶುರು ಮಾಡಿದ್ದಾರೆ. ಮಾತನಾಡಲು ಅವಕಾಶ ನೀಡದ ಕಾರಣ ರಚಿತಾ ಬೇಸರದಿಂದಲೇ ವೇದಿಕೆಯಿಂದ ಇಳಿದು ವೇದಿಕೆಯ ಮುಂಭಾಗಕ್ಕೆ ಬಂದು ಕೆಲಹೊತ್ತು ಕುಳಿತುಕೊಂಡಿದ್ದಾರೆ. 

ಆ ಬಳಿಕ ಕೂಗು ಕಡಿಮೆಯಾದ್ರೆ ಮಾತ್ರ ನಾನು ವೇದಿಕೆ ಮೇಲೆ ಬರುತ್ತೇನೆ ಎಂದಿದ್ದಾರೆ. 

ಇನ್ನೂ ರಚಿತಾ ರಾಮ್ ಹಾಗೂ ದರ್ಶನ್ ಅವರು ಉತ್ತಮ ಸ್ನೇಹಿತರಾಗಿದ್ದು, ಅವರ ಸಿನಿಮಾ ಮೂಲಕನೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನೂ ದರ್ಶನ್ ಜೈಲಿನರುವಾಗಲೂ ರಚಿತಾ ಭೇಟಿಯಾಗಿದ್ದರು. ದರ್ಶನ್ ಮೇಲಿರುವ ಅವರ ಅಭಿಮಾನವನ್ನು ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇದೀಗ ಅವರ ಅಭಿಮಾನಿಗಳಿಂದಲೇ ನಟಿ ಗರಂ ಆಗಿದ್ದಾರೆ. ಸದ್ಯ ಇದರ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ