ಸ್ಯಾಂಡಲ್‌ವುಡ್ ರೋಜ್ ಶ್ರಾವ್ಯಾ ರಾವ್ ’ಕಲ್ಯಾಣ’

ಮಂಗಳವಾರ, 20 ಡಿಸೆಂಬರ್ 2016 (11:02 IST)
ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಆದಂತ ಛಾಪು ಮೂಡಿಸಿರುವ ಬೆಡಗಿ ಶ್ರಾವ್ಯಾ ರಾವ್. ಒಂದು ರೀತಿ ಸ್ಯಾಂಡಲ್‍ವುಡ್ ರೋಜಾ ಹೂವಿದ್ದಂತೆ. ಅದೆಲ್ಲಾ ಸರಿ ಕಲ್ಯಾಣ ವಿಚಾರಕ್ಕೆ ಬರುವುದಾದರೆ... ಅದಕ್ಕೂ ಮುನ್ನ ಸ್ವಲ್ಪ ಫ್ಲಾಶ್‍ಬ್ಯಾಕ್. 
 
ಎಂಬತ್ತರ ದಶಕದ ಕೊನೆಯಲ್ಲಿ ಬಂದಂತ ನಂಜುಂಡಿ ಕಲ್ಯಾಣ ಚಿಚ್ರ ನೆನಪಿದೆಯೇ? ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಚಿತ್ರ. ಎಂ.ಎಸ್. ರಾಜಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಚಿ. ಉದಯಶಂಕರ್ ಕಥೆ ಬರೆದಿದ್ದರು. ರಾಘವೇಂದ್ರ ರಾಜ್ ಕುಮಾರ್, ಮಾಲಾಶ್ರೀ ಜೋಟಿ ಸೂಪರ್ ಹಿಟ್ ಎನ್ನಿಸಿಕೊಂಡಿತ್ತು.
 
ಈಗ ಅದೇ ಶೀರ್ಷಿಕೆಯಲ್ಲಿ ಇನ್ನೊಂದು ಚಿತ್ರ ಬರುತ್ತಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಶ್ರಾವ್ಯಾ ಆಯ್ಕೆಯಾಗಿದ್ದಾರೆ. ಮಡಮಕ್ಕಿ ಮತ್ತು ಅಲೆ ಚಿತ್ರಗಳಲ್ಲಿ ಅಭಿನಯಿಸಿರುವ ತನುಶ್ ಶಿವಣ್ಣ ಈ ಚಿತ್ರದ ನಾಯಕ. ರಾಜೇಂದ್ರ ಕಾರಂತ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. 
 
ಹೆಸರೇ ಹೇಳುವಂತೆ ಮದುವೆಯ ಹಿನ್ನೆಲೆಯಲ್ಲಿ ನಡೆಯುವ ಕಥೆ ಇದೆ. ಚಿತ್ರದಲ್ಲಿ ಮಗನಿಗೆ ಮುದ್ದಾದ ಹುಡುಗಿಯನ್ನು ಹುಡುಕೋಕೆ, ತನಗೆ ಒಳ್ಳೆ ಸೊಸೆ ತರೋಕೆ ಹೊರಡುವ ಕಥಾಹಂದರ ಇರುವ ಚಿತ್ರಕ್ಕೆ ಜಗದೀಶ್ ವಾಲಿ ಛಾಯಾಗ್ರಹಣ, ಸತೀಶ್ ಆರ್ಯನ್ ಸಂಗೀತವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ