ಸೋನಂ ಕಪೂರ್ ನೆಕ್ಲೆಸ್ ಕಳುವಾಗಿದೆಯಂತೆ...?!

ಗುರುವಾರ, 12 ಫೆಬ್ರವರಿ 2015 (09:51 IST)
ಫೆಬ್ರವರಿ 6ರಂದು ನಟಿ ಪೂನಂ ಕಪೂರ್ ತನ್ನ ನೆಕ್ಲೆಸ್ ಕಳುವಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತನ್ನ ಮನೆಯಲ್ಲಿ ಈ ನೆಕ್ಲೆಸ್ ಕಳುವಾಗಿರುವ ಬಗ್ಗೆ ಆಕೆ ತಿಳಿಸಿದ್ದಾಳೆ. ಸೋನಂ ಹಾಗೂ ಆಕೆಯ ತಾಯಿ ಸುನಿತಾ ಅವರು ಎಫ್ ಐಆರ್ ನ್ನು  380 ಐಪಿಸಿ ಸೆಕ್ಷನ್ ಅಡಿಯಲ್ಲಿ ದಾಖಲು ಮಾಡಿದ್ದಾರೆ.  
ಆಕೆ ದೂರಿನಲ್ಲಿ ತಾನು ಪಾರ್ಟಿಗೆ ಹೋಗಿ ಬಂದ ಬಳಿಕ ತನ್ನ ನೆಕ್ಲೆಸ್ ನ್ನು ತನ್ನ ರೂಮಿನ ಡ್ರಾಯರ್‌ನಲ್ಲಿ ಇಟ್ಟ ಳಂತೆ. ಇಷ್ಟಾದ ಬಳಿಕ ಆಕೆ ಮಾರನೆಯದಿನ ಆಕೆಗೆ ಅದು ಕಾಣಲಿಲ್ಲವಂತೆ. ಆಕೆಯ ಬಳಿ ಇರುವ ಆರು ಕೋಟಿ ಮೌಲ್ಯದ ಅಭರಣಗಳಲ್ಲಿ ಈ ನೆಕ್ಲೆಸ್ ಸಹಿತ ಸೇರಿತ್ತು ಎನ್ನುವ ಸಂಗತಿ ತಿಳಿದು ಬಂದಿದ್ದು, ಜಾಹೀರಾತಿಗಾಗಿ ಬಳಕೆಯಾದ ನೆಕ್ಲೆಸ್ ಆಗಿದೆ. ಮಾರನೆಯ ದಿನ ಆ ನೆಕ್ಲೆಸ್ ಸೇರಿದಂತೆ ಎಲ್ಲ ಒಡವೆಗಳನ್ನು ಕೊಂಡೊಯ್ಯಲು ಬಂದಾಗ ಎಲ್ಲ ಒಡವೆಗಳಿದ್ದು, ಅದು ಮಾತ್ರ ಕಾಣೆಯಾಗಿತ್ತು ಎನ್ನುವ ಸಂಗತಿ ತಿಳಿದು ಬಂದಿದೆ. 
 
ಈಕೆ ಧರಿಸಿದ್ದ ಆ ನೆಕ್ಲೆಸ್ ಪ್ರಸಿದ್ಧ ಆಭರಣದ ಮಳಿಗೆಗೆ ಸೇರಿದ್ದಾಗಿದೆ. ಜುಹೂ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಈಗ ಅದಕ್ಕೆ ಸಂಬಂಧಪಟ್ಟಂತೆ ಶೋಧನಾ ಕಾರ್ಯಗಳು ಸಹಿತ ಆರಂಭವಾಗಿದೆ ಎನ್ನುವ ಸುದ್ದಿ ಈಗ ಬಿ ಟೌನ್ ನಲ್ಲಿ ಹರಿದಾಡುತ್ತಿದೆ. ಈ ನಟಿ  ಇತ್ತೀಚಿಗೆ ದೇಹಾರೋಗ್ಯ ಸರಿ ಇಲ್ಲದ ಕಾರಣದಿಂದ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಳು. ಈಗ ಆಕೆಗೆ ಮತ್ತೆ   ಆಸ್ಪತ್ರೆ ಸೇರುವ ಆತಂಕ ಉಂಟು ಮಾಡಿದೆ ಈ ಕಳುವಿನ ಪ್ರಕರಣ. 

ವೆಬ್ದುನಿಯಾವನ್ನು ಓದಿ