ಶಿಮ್ಲಾದ ಸೇಬು- ಪ್ರೀತಿ ಜಿಂಟಾ

ಶುಕ್ರವಾರ, 21 ನವೆಂಬರ್ 2014 (16:54 IST)
ಬಾಲಿವುಡ್ ಜಗತ್ತಿನಲ್ಲಿ ಗಾಢ್ ಪಾದರ್ ಇಲ್ಲದೆ ಕೇವಲ ತನ್ನ ಕಲಾತ್ಮಕ ನಟನೆಯಿಂದಲೆ ಮೇಲೆದ್ದು ಬಂದ ನಟಿಯರಲ್ಲಿ ಶಿಮ್ಲಾದ ಸೇಬು ಎಂದೇ ಬಾಲಿವುಡ್‌ನಲ್ಲಿ ಖ್ಯಾತಿ ಗಳಿಸಿದ ಪ್ರೀತಿ ಜಿಂಟಾ ಇದೀಗ ಬಹು ಬೇಡಿಕೆಯ ತಾರೆ.
 
ಪ್ರೀತಿ 13ವರ್ಷದ ಮಗುವಾಗಿದ್ದಾಗಲೆ ತಂದೆ ರಸ್ತೆ ಅಪಘಾತವೊಂದರಲ್ಲಿ ಅಕಾಲಿಕ ಮರಣವನ್ನಪ್ಪಿದ್ದ ನಂತರ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಾ, ಅಪರಾಧ ಮನಶಾಸ್ತ್ರ ವಿಭಾಗದಲ್ಲಿ ಪದವಿ ಗಳಿಸಿ, ಜಾಹಿರಾತು ಜಗತ್ತಿಗೆ ಕಾಲಿರಿಸಿ ರೂಪದರ್ಶಿಯಾಗಿ ಭವಿಷ್ಯವನ್ನು ಅರಸಿಕೊಂಡರು.
 
ತೆಳ್ಳನೆಯ ದೇಹ, ಆಕರ್ಷಕ ಮೈಮಾಟ, ಉತ್ತಮ ಮಾತುಗಾರಿಕೆ, ಮೊದಲ ನೋಟದಲ್ಲಿಯೆ ಆಕರ್ಷಿಸುಸುವ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡಿರುವ ಪ್ರೀತಿಯನ್ನು ಶೇಖರ್ ಕಪೂರ್ ಚಿತ್ರ ಜಗತ್ತಿಗೆ ಪರಿಚಯಿಸಿದರು.
 
ಪ್ರೀತಿ ಅಭಿನಯಿಸಿದ ಮೊದಲ ಚಿತ್ರ 'ತಾರಾ ರಂ ಪಂ' ಬಿಡುಗಡೆಯಾಗಲೆ ಇಲ್ಲ, ಆದರೆ ಅಷ್ಟೊತ್ತಿಗಾಗಲೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದ ಪ್ರೀತಿಯನ್ನು, ಮಣಿರತ್ನಂ 'ದಿಲ್ ಸೆ' ಚಿತ್ರದಲ್ಲಿ ಅಭಿನಯಿಸಲು ಕೇಳಿಕೊಂಡಾಗ ಪ್ರೀತಿ ತುಂಬು ಮನಸ್ಸಿನಿಂದ ಒಪ್ಪಿಗೆ ನೀಡಿದಳು.
 
ಮೊದಲ ಚಿತ್ರದಲ್ಲಿಯೆ ಅದ್ಭುತ ಯಶಸ್ಸನ್ನು ಗಳಿಸಿದ ಪ್ರೀತಿ ಈ ಚಿತ್ರಕ್ಕಾಗಿ ಅತ್ಯುತ್ತಮ ಆರಂಭಿಕ ನಟಿ ಎಂದು ಫಿಲ್ಮಪೇರ್ ಪ್ರಶಸ್ತಿಯನ್ನು ಗಳಿಸಿದಳು.
 
ಆರಂಭಿಕ ಯಶಸ್ಸಿನ ನಂತರ ಪ್ರೀತಿ ಒಂದರ ಹಿಂದೊಂದು ಜನಪ್ರಿಯ ಚಿತ್ರಗಳನ್ನು ನೀಡುತ್ತಾ ಬಾಲಿವುಡ್ ಜಗತ್ತಿನಲ್ಲಿ ಬಲವಾದ ಸ್ಥಾನವನ್ನು ಗಳಿಸಿದರು. 98ರಲ್ಲಿಯೆ 'ಸೋಲ್ಜರ್', 99ರಲ್ಲಿ 'ಸಂಘರ್ಷ', 2000ದಲ್ಲಿ 'ಕ್ಯಾ ಕೆಹ್ನಾ', 'ಹರ್ ದಿಲ್ ಜೋ ಪ್ಯಾರ್ ಕರೆಗಾ', 'ಮಿಶನ್ ಕಾಶ್ಮೀರ್', 2001ರಲ್ಲಿ 'ಚೋರಿ ಚೋರಿ ಚುಪ್ಕೆ ಚುಪ್ಕೆ', 'ದಿಲ್ ಚಾಹ್ತಾ ಹೈ', 2002ರಲ್ಲಿ 'ದಿಲ್ ಹೈ ತುಮಾರಾ',ದತಂಹ ಜನಪ್ರಿಯ ಚಿತ್ರಗಳನ್ನು ನೀಡಿದ ಪ್ರೀತಿ ಇದೀಗ ಬಹು ಬೇಡಿಕೆಯ ತಾರೆಯಾಗಿದ್ದಾರೆ.
 
'ಕಲ್ ಹೋ ನ ಹೋ' ಚಿತ್ರಕ್ಕೆ 2003ರ ಅತ್ಯುತ್ತಮ ಚಿತ್ರನಟಿ ಎಂದು ಫಿಲ್ಮ್ ಪೇರ್ ಪ್ರಶಸ್ತಿಯನ್ನು ಸಹ ಪ್ರೀತಿ ಜಿಂಟಾ ತಮ್ಮದಾಗಿಸಿಕೊಂಡಿದ್ದು, ಇದೇ ಚಿತ್ರಕ್ಕೆ ಐಐಎಫ್‌ಎ ಅತ್ಯುತ್ತಮ ಚಿತ್ರನಟಿ ಪ್ರಶಸ್ತಿ ಕೂಡಾ ಲಭಿಸಿದೆ.

ವೆಬ್ದುನಿಯಾವನ್ನು ಓದಿ