ಹುಬ್ಬಳ್ಳಿಯ ಹೂಡಿಕೆದಾರರಿಗೆ 2 ಕೋಟಿ ವಂಚಿಸಿದ ಓಂಕಾರೇಶ್ವರ ಫೈನಾನ್ಸ್

ಶುಕ್ರವಾರ, 27 ನವೆಂಬರ್ 2015 (11:56 IST)
ಹುಬ್ಬಳ್ಳಿಯ ಓಂಕಾರೇಶ್ವೇರ ಫೈನಾನ್ಸ್ ಕಂಪನಿ ಹೂಡಿಕೆದಾರರಿಗೆ 2 ಕೋಟಿ ವಂಚನೆ ಮಾಡಿದೆ ಎಂದು ದೂರು ನೀಡಲಾಗಿದೆ. 35 ಜನರಿಗೆ 2 ಕೋಟಿಗೂ ಹೆಚ್ಚು ಹಣವನ್ನು ಚಿಟ್ ಫಂಡ್ ಹೆಸರಿನಲ್ಲಿ ಸಂಗ್ರಹಿಸಿ ವಂಚನೆ ಮಾಡಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಫೈನಾನ್ಸ್ ಮಾಲೀಕ ಪರಶುರಾಮ ಉಪಚಗಿ ನಾಪತ್ತೆಯಾಗಿದ್ದಾನೆಂದು ತಿಳಿದುಬಂದಿದೆ.  ಕಳೆದ 10-12 ವರ್ಷಗಳಿಂದ ಚಿಟ್ ಫಂಡ್ ನಡೆಸುತ್ತಿದ್ದ ಅವನು ನಷ್ಟವಾಗಿದೆಯೆಂದು ಹೇಳಿ ಕಳೆದ 8 ತಿಂಗಳಿಂದ ಯಾವುದೇ ಕಾರ್ಯನಿರ್ವಹಿಸುತ್ತಿರಲಿಲ್ಲ.

ಈ ಕುರಿತು ಹೂಡಿಕೆದಾರರು ಪ್ರಶ್ನಿಸಿದಾಗ ನಾನು ಈಗ ಸ್ವಲ್ಪ ತೊಂದರೆಯಲ್ಲಿದ್ದೇನೆ. ಸುಧಾರಣೆಯಾದ ಬಳಿಕ ಹಿಂತಿರುಗಿಸುತ್ತೇನೆ. ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಿದ್ದ. ಈಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರಿಂದ ಗ್ರಾಹಕರಿಗೆ ತಲೆಬಿಸಿಯಾಗಿದೆ. 

ವೆಬ್ದುನಿಯಾವನ್ನು ಓದಿ