ಬಾವಿಗೆ ಬಿದ್ದ ಎರಡು ವರ್ಷದ ಮಗು, ಪೈಪ್ ಹಿಡಿದು ಕುಳಿತ ಮಗು ಬದುಕುಳಿದಿದ್ದೆ ಪವಾಡ, ರಕ್ಷಣೆ Video
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಹತ್ತಿರದಲ್ಲೇ ವಾಸವಿರುವ ಪಯಾಜ್ ಚೌಟಿ ಎಂಬುವವರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.
ಇನ್ನೂ ಪಯಾಜ್ ಅವರು ಬೆಂಗಳೂರಿಗೆ ಹೊರಡುವ ಸಿದ್ಧತೆಯಲ್ಲಿದ್ದರು. ಘಟನೆಯ ತೀವ್ರತೆ ಕಂಡು ಕ್ಷಣಾರ್ಧವೂ ತಡಮಾಡದೆ ಬಾವಿಗೆ ಇಳಿಯಲು ಸಿದ್ಧರಾದರು. ಜನರ ಸಹಾಯದೊಂದಿಗೆ ಬಾವಿಗಿಳಿದ ಅವರು, ಸುರಕ್ಷಿತವಾಗಿ ಬಾಲೆಯನ್ನು ಮೇಲಕ್ಕೆತ್ತಿ ತರುವಲ್ಲಿ ಯಶಸ್ವಿಯಾದರು