ಬಿಕ್ಲು ಶಿವ ಕೊಲೆ ಪ್ರಕರಣ: ಪೊಲೀಸ್‌ಗೆ ತಲೆನೋವಾದ ಬೈರತಿ ಬಸವರಾಜ್ ನಡವಳಿಕೆ

Sampriya

ಬುಧವಾರ, 18 ಫೆಬ್ರವರಿ 2026 (14:22 IST)
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ  ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರು ವಿಚಾರಣೆ ವೇಳೆ ಫುಲ್ ಸೈಲೆಂಟ್ ಆಗಿದ್ದಾರೆಂಬ ಮಾಹಿತಿಯಿದೆ. 

ಕೊಲೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಭೈರತಿ . ವಿಚಾರಣೆ ವೇಳೆ ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಬೈರತಿ ಫುಲ್‌ ಸೈಲೆಂಟ್‌ ಆಗಿರುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಇಲ್ಲಿವರೆಗೂ ಇಪ್ಪತ್ತು ಜನ ಆರೋಪಿಗಳು ಬಂಧನವಾಗಿದ್ದಾರೆ. ತನಿಖೆ ವೇಳೆ ಸಿಐಡಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿ ಕೊಲೆ ಸಂಬಂಧ ಹೇಳಿಕೆಗಳನ್ನು ಪಡೆದುಕೊಂಡು ಕೆಲವೊಂದು ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. 

ಅದರ ಅನ್ವಯ ಪೊಲೀಸರು ಪೂರಕ ದಾಖಲೆಗಳನ್ನು ಮುಂದಿಟ್ಟುಕೊಂಡೇ ಸಿಐಡಿ ಪೊಲೀಸರು, ಬೈರತಿ ಬಸವರಾಜ್ ಬಂಧಿಸಿ ವಿಚಾರಣೆಯ ಅನಿವಾರ್ಯತೆಯ ಉದ್ದೇಶವನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ, ಕಸ್ಟಡಿಗೆ ಪಡೆದ ಸಿಐಡಿ ಅಧಿಕಾರಿಗಳಿಗೆ ಬೈರತಿ ಬಸವರಾಜ್ ಮೊಂಡಾಟ ತಲೆನೋವಾಗಿದೆ.

ಅನಾರೋಗ್ಯದ ನೆಪದಲ್ಲಿ ಕಸ್ಟಡಿಗೆ ಸಿಕ್ಕಿರುವ ಬೈರತಿ ಬಸವರಾಜ್ ಅವರು ತನಿಖೆಗೆ ಸ್ಪಂದಿಸುತ್ತಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಏನೇ ಪ್ರಶ್ನೆ ಕೇಳಿದರೂ, ನಂಗೇನು ಗೊತ್ತಿಲ್ಲ ಗೊತ್ತಿಲ್ಲ ಅನ್ನೋ ಸಿದ್ಧ ಉತ್ತರ ನೀಡುತ್ತಿದ್ದಾರೆ. ಆದರೆ, ಈ ಹಿಂದೆ ಇದೇ ಕೇಸಲ್ಲಿ ಬಂಧಿತರಾಗಿರುವ ಆರೋಪಿಗಳ ಹೇಳಿಕೆಗಳು ಬೈರತಿ ಬಸವರಾಜ್‌ಗೆ ಸಂಕಷ್ಟ ತರಲಿವೆ ಎನ್ನುವ ಮಾಹಿತಿಗಳು  ಮೂಲಗಳಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ