ಡಿಕೆ ಶಿವಕುಮಾರ್ ಬೆದರಿಕೆ ಎಲ್ಲಾ ನಮ್ಮ ಮುಂದೆ ಬೇಡ: ಬಿವೈ ವಿಜಯೇಂದ್ರ

Krishnaveni K

ಗುರುವಾರ, 19 ಫೆಬ್ರವರಿ 2026 (09:36 IST)
ಬೆಂಗಳೂರು: ಡಿಕೆ ಶಿವಕುಮಾರ್ ಬೆದರಿಕೆ ಎಲ್ಲಾ ನಮ್ಮ ಜೊತೆ ಬೇಡ. ಅವರ ಗೊಡ್ಡು ಬೆದರಿಕೆಗೆಲ್ಲಾ ಹೆದರುವವರಲ್ಲ ನಾವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರಿನ ಕಸವನ್ನು ನಿಯಮಬಾಹಿರವಾಗಿ ದೊಡ್ಡಬಳ್ಳಾಪುರಕ್ಕೆ ಸಾಗಿಸಲಾಗುತ್ತಿದೆ ಎಂದು ಬಿಜೆಪಿ ಅಡ್ಡಿಪಡಿಸುತ್ತಿರುವುದಕ್ಕೆ ಡಿಕೆ ಶಿವಕುಮಾರ್ ಗರಂ ಆಗಿ ಗರಂ ಆಗಿ ಬಿಜೆಪಿ ನಾಯಕರ ಮನೆ ಮುಂದೆಯೇ ಕಸ ಸುರಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಇದಕ್ಕೆ ಬಿಜೆಪಿ ನಾಯಕ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ‘ಉಪ ಮುಖ್ಯಮಂತ್ರಿಗಳ ಗೊಡ್ಡು ಬೆದರಿಕೆಗೆ ಬಿಜೆಪಿ ಬಗ್ಗುವುದಿಲ್ಲ.‌ ಕಸ ವಿಲೇವಾರಿ ರಾಜ್ಯ ಸರ್ಕಾರದ ಜವಾಬ್ದಾರಿ, ಮನಸ್ಸು ಬಂದ ಕಡೆ ಕಸ ಸುರಿಯಲು ರಾಜ್ಯದ ಜನತೆ ಬಿಟ್ಟಿ ಬಿದ್ದಿಲ್ಲ. ರಾಜ್ಯ ಸರ್ಕಾರ ‌ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಿ.

ಬಿಜೆಪಿ ಕಚೇರಿ ಮುಂದೆ, ಶಾಸಕರ ಮನೆ ಮುಂದೆ ಕಸ ಸುರಿಯುತ್ತೇನೆ ಎನ್ನುವ ಪಾಳೇಗಾರಿಕೆ ಮನಸ್ಥಿತಿಯಿಂದ‌ ಕಾಂಗ್ರೆಸ್ ಹೊರಬರಲಿ. ಕೊತ್ವಾಲನ‌ ಕಾಲ ಮುಗಿದಿದೆ, ಇಲ್ಲಿ‌ ಬೆದರುವವರು ಯಾರೂ ಇಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ