ಬೈಕ್ ಸವಾರನ ಅತಿ ವೇಗದ ಚಾಲನೆಗೆ ವಿದ್ಯುತ್ ಕಂಬವೇ ಎರಡು ತುಂಡು, ಮೈ ಝುಮ್ಮೆನಿಸುತ್ತದೆ, Video

Sampriya

ಮಂಗಳವಾರ, 17 ಫೆಬ್ರವರಿ 2026 (19:52 IST)
Photo Credit X
ಮಂಗಳೂರಿನ ಉಳ್ಳಾಲದ ಕಿನ್ಯಾ ಸಂಕೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ 
ಅತಿವೇಗವಾಗಿ ಬಂದ ಬೈಕ್‌ ಸಾವರ, ನಿಯಂತ್ರಣಗೆ ಸಿಗದೆ ಇದ್ದಾಗ ರಸ್ತೆ ಬಳಿಯಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಇನ್ನೂ ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬಕ್ಕೆ ತುಂಡಾಗಿ ನೆಲಕ್ಕೆ ಬಿದ್ದಿದೆ. 

ಪವಾಡ ಸದೃಶ್ಯ ಬೈಕ್ ಸವಾರರಿಬ್ಬರಿಗೆ ಗಂಭೀರ ಗಾಯಗಳಾಗಿದ್ದರು. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೋಮವಾರ ಸಂಜೆ 5:00 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಅತಿ ವೇಗದಲ್ಲಿ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಕಾಂಕ್ರೀಟ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. 

ಪರಿಣಾಮ ಕಂಬ ಅರ್ಧ ಮುರಿದು ರಸ್ತೆಗೆ ಬಿದ್ದಿದೆ. ಅಪಘಾತದ ತೀವ್ರತೆಯನ್ನು ನೋಡಿದವರು ದಿಗ್ಭ್ರಮೆಗೊಂಡಿದ್ದು, ಹತ್ತಿರದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಘಟನೆ ಸೆರೆಯಾಗಿದೆ.

ಇನ್ನೂ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ವಿಜಯಪುರದವರೆಂದು ಗುರುತಿಸಲಾಗಿದೆ. 

On camera: A high-speed bike crash in Mangaluru left a concrete electric pole snapped in half. Two student riders miraculously survived but sustained serious injuries. Bystanders were hesitant to help them, as live electric wires were seen dangling around the accident site. pic.twitter.com/TunqIfQUbm

— Gummalla Lakshmana (@GUMMALLALAKSHM3) February 17, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ