ಹೆರಿಗೆ ರಜೆಯಲ್ಲಿ ಹೋಗುವ ಶಿಕ್ಷಕಿಯರಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ

Sampriya

ಸೋಮವಾರ, 16 ಮಾರ್ಚ್ 2026 (18:19 IST)
ಬೆಂಗಳೂರು: ಮಾತೃತ್ವದ ರಜೆ ನಂತರ ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರಿಗೆ ಅವರು ಮುಂದಿನ ಐದು ವರ್ಷವನ್ನು ಅವರು ಇಚ್ಛಿಸುವ ಶಾಲೆಗಳಿಗೆ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ವಿಧಾನಪರಿಷತ್‌ನಲ್ಲಿ ಬಿಜೆಪಿಯ ವೈ.ಎಂ.ಸತೀಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಗುವಿನ ವಯಸ್ಸು 5 ವರ್ಷ ಪೂರ್ಣಗೊಳ್ಳುವವರೆಗೂ ಅವರ ಲಾಲನೆಪಾಲನೆಗೆ ಹೆಚ್ಚಿನ ಸಮಯ ನೀಡಬೇಕಾಗುತ್ತದೆ. 

ಈ ದೃಷ್ಟಿಯಲ್ಲಿ ಇಲಾಖೆಯು ಮಕ್ಕಳ ಆರೈಕೆ ಹಾಗೂ ಮಹಿಳಾ ನೌರರರ ವಿಶ್ರಾಂತಿ ಅಹತ್ಯಗಳನ್ನು ಗಮನದಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿಯನ್ನು ನೀಡಿದರು. 

ಕರ್ನಾಟಕದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ವೇತನ ಸಹಿತ ಮಾತೃತ್ವ ರಜೆ ನೀಡಲಾಗಿದೆ. ಈ ಸೌಲಭ್ಯ ಎರಡು ಮಕ್ಕಳಿಗೆ ಅನ್ವಯಿಸುತ್ತದೆ. ಜತೆಗೆ ಅಷ್ಟೇ ಅವಧಿ (ಆರು ತಿಂಗಳು) ಒಳಗೊಂಡ ಶಿಶುಪಾಲನಾ ರಜೆಯನ್ನು ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆಯರು ತಮ್ಮ ಮಕ್ಕಳಿಗೆ 18 ವರ್ಷ ತುಂಬುವುದರ ಒಳಗೆ ರಜೆಯ ಸೌಲಭ್ಯ ಪಡೆಯಬಹುದು. ಶಿಕ್ಷಕಿಯರು ಮಾತೃತ್ವದ ರಜೆಯ ಜತೆಗೆ, ಶಿಶುಪಾಲನಾ ರಜೆಯನ್ನೂ ಸಂಯೋಜಿಸಿಕೊಂಡು ಪಡೆಯಬಹುದು. 

ಎರಡೂ ರಜೆಗಳ ಅವಧಿ ಮುಗಿದ ನಂತರ ನಾಲ್ಕು ವರ್ಷಗಳು ತಮಗೆ ಅನುಕೂಲವಾಗುವ ಶಾಲೆಗೆ ಸ್ಥಳ ನಿಯೋಜನೆ ಮಾಡಿಸಿಕೊಂಡು ಕೆಲಸಮಾಡಬಹುದು ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ