ಬೆಂಗಳೂರು: ಕಸವನ್ನು ಎಲ್ಲಾದರೂ ಒಂದು ಕಡೆ ಹಾಕಲೇ ಬೇಕಾಗುತ್ತದೆ.ಅಲ್ಲೂ ಬೇಡ ಇಲ್ಲೂ ಬೇಡ ಅಂದ್ರೆ, ಆ ಕಸವನ್ನು ಅಶೋಕ್, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿಗೆ ಹೋಗಬೇಕಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ಹೊರಹಾಕಿದರು.
ಎಲ್ಲಾ ಶಾಸಕರು ಅನುದಾನ ಬೇಕೆಂದು ಆಕ್ಸಿಡೆಂಟ್ ವಿಚಾರವನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಗೌರವದಿಂದ ನಡೆದುಕೊಂಡರೆ ಒಳಿತು, ಇಲ್ಲದಿದ್ದರೆ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಅಶೋಕ್, ವಿಜಯೇಂದ್ರ ಮನೆ ಮುಂದೆನೇ ಕಸ ಹಾಕಿಸಬೇಕಾಗುತ್ತೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.
ಕಸವನ್ನು ಅಲ್ಲೂ ಹಾಕುವುದು ಬೇಡೆ, ಇಲ್ಲ ಬೇಡ ಅಂತಾ ಹೇಳುತ್ತಾರೆ. ಕಸ ಎಲ್ಲಾದ್ರೂ ಒಂದು ಕಡೆ ಹಾಕಲೇ ಬೇಕಲ್ವಾ. ನಿನ್ನೆ ಲಿಂಬಾವಳಿ ಪ್ರತಿಭಟನೆ ಮಾಡಿದ್ರೆ,, ಇವತ್ತು ದೊಡ್ಡಬಳ್ಳಾಪುರದ ಎಂಎಲ್‌ಎ ಪ್ರತಿಭಟನೆ ಮಾಡುತ್ತಿದ್ದಾನೆ. ಎಲ್ಲರೂ ಗೌರವದಿಂದ ಇದ್ರೆ ಸರಿ, ಇಲ್ಲದಿದ್ರೆ ಕರುಣೆ ತೋರಿಸಲ್ಲ. ಎಸ್ಮಾ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದರು.
ಇವರೆಲ್ಲ ತಮ್ಮ ಕ್ಷೇತ್ರಕ್ಕೆ ಅನುದಾನ ಬೇಕು ಅಂತ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಸುಮ್ಮನೆ ಇರಲಿಲ್ಲ ಅಶೋಕ್, ವಿಜಯೇಂದ್ರ ಮನೆ ಮುಂದೆನೇ ಕಸ ಹಾಕಿಸ್ತೀನಿ, ಅಥವಾ ಬಿಜೆಪಿ ಕಚೇರಿ ಮುಂದೆಯೇ ಕಸ ಹಾಕಿಸ್ತೀನಿ ಎಂದು ವಾರ್ನಿಂಗ್ ಕೊಟ್ಟರು.