Karnataka Weather: ಕೇರಳಕ್ಕೆ ಮಳೆ ನಿರೀಕ್ಷೆ, ಕರ್ನಾಟಕದಲ್ಲಿ ಮಳೆಯಿರುತ್ತಾ
ರಾಜ್ಯದಲ್ಲಿ ನಿನ್ನೆ ಬೆಂಗಳೂರು, ಕರಾವಳಿ ಜಿಲ್ಲೆಗಳಲ್ಲಿ ಭಾಗಶಃ ಮೋಡಕವಿದ ವಾತಾವರಣ ಕಂಡುಬಂದಿತ್ತು. ಇಂದೂ ಕೂಡಾ ಬೆಳಗಿನ ವೇಳೆ ಚಳಿ ಕಂಡುಬಂದಿದ್ದು ನಿನ್ನೆಗೆ ಹೋಲಿಸಿದರೆ ಬಿಸಿಲಿನ ಝಳ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕೇರಳದಲ್ಲಿ ನಾಳೆ ಮತ್ತು ನಾಡಿದ್ದು ಮಳೆಯ ಸಾಧ್ಯತೆಯಿದೆ ಎನ್ನಲಾಗಿದೆ. ಮೊನ್ನೆಯಿಂದಲೇ ಬೆಳಗ್ಗಿನ ಹೊತ್ತು ಮೋಡ ಕಂಡುಬರುತ್ತಿದೆ. ಆದರೆ ರಾಜ್ಯಕ್ಕೆ ಇಂದು ಅಥವಾ ಇನ್ನು ಎರಡು ದಿನಗಳಿಗೆ ಯಾವುದೇ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಯಿಲ್ಲ.
ರಾಜ್ಯದ ಗರಿಷ್ಠ ತಾಪಮಾನ ಇಂದು 31 ಡಿಗ್ರಿ ತಲುಪಲಿದ್ದು ಬಿಸಿಲಿನ ಝಳ ಹೆಚ್ಚಾಗುವುದು. ಕನಿಷ್ಠ ತಾಪಮಾನ 17 ಡಿಗ್ರಿಯಷ್ಟು ಕಂಡುಬರಲಿದೆ. ಇಂದೂ ಕೂಡಾ ಬೆಳಿಗ್ಗೆ ಕೊಂಚ ತಂಪು ವಾತಾವರಣವಿದ್ದರೂ ಹೊತ್ತು ಕಳೆದಂತೆ ಬಿಸಿಲಿನ ತಾಪ ಏರಿಕೆಯಾಗಲಿದೆ.