ಹೆಲ್ಮೆಟ್ ಧರಿಸದೇ ಓಡಾಡಿದ್ರೆ ಇನ್ನು ಲೈಸೆನ್ಸ್ ರದ್ದು

ಮಂಗಳವಾರ, 20 ಅಕ್ಟೋಬರ್ 2020 (10:06 IST)
ಬೆಂಗಳೂರು: ಸಂಚಾರಿ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.


ಇನ್ನು, ಮುಂದೆ ಹೆಲ್ಮೆಟ್ ಧರಿಸದೇ ಓಡಾಡಿದ್ರೆ ಮೂರು ತಿಂಗಳು ಪರವಾನಗಿ ರದ್ದು ಮಾಡುವ ಕಠಿಣ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯ ಕಾರ್ಯದರ್ಶಿಗಳು ಈ ಹೊಸ ನಿಯಮ ಜಾರಿಗೆ ತರಲು ಸೂಚನೆ ನೀಡಿದ್ದಾರೆ. ವಾಹನ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಇಂತಹದ್ದೊಂದು ಕಠಿಣ ನಿಯಮ ಜಾರಿಗೆ ತರಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ