ರೀಲ್ಸ್ ಗಾಗಿ ಪುಟಾಣಿ ಮಗುವಿಗೆ ಸಿಗರೇಟ್, ಬಿಯರ್ ಕೊಟ್ಟ ಯುವಕ: Video

Krishnaveni K

ಗುರುವಾರ, 19 ಫೆಬ್ರವರಿ 2026 (10:47 IST)
Photo Credit: X
ಜೈಪುರ: ರೀಲ್ಸ್ ಗಾಗಿ ಪುಟಾಣಿ ಬಾಲಕನಿಗೆ ಸಿಗರೇಟು ಮತ್ತು ಬಿಯರ್ ಕೊಟ್ಟ ಯುವಕನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಜನ ರೀಲ್ಸ್ ಗಾಗಿ ಏನೇನೋ ಸರ್ಕಸ್ ಮಾಡುತ್ತಾರೆ. ಆದರೆ ಈ ಯುವಕ ಮಾಡಿರುವುದು ಮಾತ್ರ ಅಕ್ಷಮ್ಯ ಅಪರಾಧ. ಚಿಕ್ಕಮಕ್ಕಳಿಗೆ ಇಂತಹ ಪಾಠ ಕಲಿಸಿದರೆ ಅವರ ಭವಿಷ್ಯ ಏನಾಗಬಹುದು ಎಂಬ ಯೋಚನೆಯೂ ಇಲ್ಲದೇ ಈ ಯುವಕ ನಡೆದುಕೊಂಡಿದ್ದಾನೆ.

ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎನ್ನಲಾಗಿದೆ. ಓರ್ವ ಯುವಕ ಬೈಕ್ ಮೇಲೆ ಕೂತುಕೊಂಡು ಒಂದು ಕೈಯಲ್ಲಿ ಸಿಗರೇಟು ಇನ್ನೊಂದು ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡಿದ್ದಾನೆ. ಆತನ ಜೊತೆಗೆ ಓರ್ವ ಪುಟಾಣಿ ಬಾಲಕನೂ ಇದ್ದಾನೆ. ಆತನಿಗೆ ಹೆಚ್ಚು ಅಂದರೆ ಐದು ವರ್ಷ ಇರಬಹುದು. ಆತನ ಕೈಯಲ್ಲೂ ಒಂದು ಬಿಯರ್ ಬಾಟಲಿ ಇರುತ್ತದೆ.

ಮೊದಲು ತಾನು ಸಿಗರೇಟು ಸೇದುವ ಯುವಕ ಬಳಿಕ ಆ ಪುಟಾಣಿಗೆ ಸಿಗರೇಟು ಕೊಡುತ್ತಾನೆ. ಆತನೂ ಒಮ್ಮೆ ಸಿಗರೇಟು ಸೇದಿ ಬಳಿಕ ಕೈಯಲ್ಲಿದ್ದ ಬಾಟಲಿಯಿಂದ ಬಿಯರ್ ಸೇದುತ್ತಾನೆ. ಚಿಕ್ಕಮಕ್ಕಳಿಗೆ ಸಿಗರೇಟು, ಮದ್ಯಪಾನ ಮಾಡಿಸುವುದು ಭಾರತದಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಹೀಗಾಗಿ ಈ ಯುವಕನ ವಿರುದ್ಧವೂ ಕ್ರಮವಾಗಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

pic.twitter.com/JSLArKrIU8

 

— Divya Gandotra Tandon (@divya_gandotra) February 18, 2026

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ