ಬೆಂಗಳೂರು: ಅಪ್ಪನ ಆಸ್ತಿಯಲ್ಲಿ ಪಾಲು ಕೇಳೋ ಹೆಣ್ಣು ಮಕ್ಕಳು ಅಪ್ಪ ಮಾಡಿದ ಸಾಲ ತೀರಿಸಬೇಕು ಎಂದರೆ ಗಂಡು ಮಕ್ಕಳ ಕಡೆ ಕೈ ತೋರಿಸುತ್ತಾರೆ ಎಂದು ನ್ಯಾಯಾಧೀಶರು ತರಾಟೆಗೆ ತೆಗೆದುಕೊಳ್ಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಸ್ತಿ ಪಾಲು ವಿಚಾರವಾಗಿ ಇತ್ತೀಚೆಗೆ ಅಣ್ಣ-ತಂಗಿಯರ ನಡುವೆಯೇ ವಾಗ್ವಾದವಾಗಿ ಕೋರ್ಟ್ ವಿವಾದ ಕೋರ್ಟ್ ಮೆಟ್ಟಿಲೇರುವುದು ಸಾಮಾನ್ಯವಾಗಿದೆ. ಇಂತಹದ್ದೇ ಒಂದು ಪ್ರಕರಣದ ವಿಚಾರಣೆಯನ್ನು ನಡೆಸುವ ನ್ಯಾಯಾಧೀಶರು ಹೆಣ್ಣು ಮಕ್ಕಳಿಗೆ ಚಾಟಿ ಬೀಸಿದ್ದಾರೆ.
ಮೂರ್ತಿ ರಾವ್ ಎನ್ನುವವರ ಮಕ್ಕಳು ಆಸ್ತಿ ಪಾಲಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಚಾರ ನಡೆಸುವ ನ್ಯಾಯಾಧೀಶರು ಅವರು ಬಿಟ್ಟು ಹೋದ ಪ್ರಾಪರ್ಟಿಗೆ ಮಾತ್ರ ಗಲಾಟೆ. ಇದೇ ಈ ಮೂರ್ತಿ ರಾವ್ ಎನ್ನುವವರು 20 ಲಕ್ಷ ಸಾಲ ಮಾಡಿದ್ದಾರೆ ಎಂದುಕೊಳ್ಳಿ. ಯಾವ ಹೆಣ್ಣು ಮಕ್ಕಳು ಮುಂದೆ ಬಂದು ತೀರಿಸಿದ್ದೀರಿ ಹೇಳಿ. ಗಂಡು ಮಕ್ಕಳು ತೀರಿಸಬೇಕು ಎಂದು ಹೇಳುತ್ತಾರೆ. ಅದೇ ಅಕ್ಕನೋ, ತಂಗಿಯದ್ದೋ ಮದುವೆ ಆಯ್ತು ಎಂದರೆ ಆ ಗಂಡು ಹುಡುಗ ಆದವನು ಪಂಚೆ ಮೇಲೆ ಕಟ್ಕೊಂಡು ಊರೆಲ್ಲಾ ಓಡಾಡಿ, ಬಡಿಸೋದರಿಂದ ಹಿಡಿದು ಎಂಜಲು ಲೋಟ ತೆಗೆಯುವವರೆಗೆ ಎಲ್ಲಾ ಮಾಡಿರುತ್ತಾರೆ. ಹೆಣ್ಣು ಮಕ್ಕಳು ಏನು ಮಾಡ್ತಾರೆ? ಗಂಡು ಮಕ್ಕಳ ಮದುವೆಲಿ ಚೆನ್ನಾಗಿ ಮೇಕಪ್ ಮಾಡ್ಕೊಂಡು, ರೇಷ್ಮೆ ಸೀರೆ ಉಟ್ಕೊಂಡು ಇಲ್ಲಿಂದ ಅಲ್ಲಿಗೆ ಟುಕ್ಕು ಟಕ್ಕು ಎಂದು ಓಡಾಡಿಕೊಂಡು ನಿಂತುಬಿಟ್ಟಿರುತ್ತಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು ಅಂತೂ ಗಂಡು ಮಕ್ಕಳ ಪರವಾಗಿ ಒಬ್ಬರಾದರೂ ಮಾತನಾಡಿದ್ರು ಎಂದಿದ್ದಾರೆ.