ಬಿಜೆಪಿ ಕೇಂದ್ರ ಸಚಿವನ ಕಾರ್ಯವೈಖರಿ ಸೋತುಹೋದ ಜಮೀರ್ ಅಹ್ಮದ್‌, ಹೇಳಿದ್ದೇನು

Sampriya

ಮಂಗಳವಾರ, 17 ಫೆಬ್ರವರಿ 2026 (20:15 IST)
ಬೆಂಗಳೂರು: ಬಿಜೆಪಿ ಕೇಂದ್ರ ಸಚಿವ ವಿ ಸೋಮಣ್ಣ ಅವರನ್ನು ರಾಜ್ಯ ಸಚಿವ ಜಮೀರ್ ಅಹ್ಮದ್ ಖಾನ್ ಕೊಂಡಾಡಿದ್ದಾರೆ. 

ಬೆಂಗಳೂರಿನ ವಿಜಯನಗರ-ಮೈಸೂರು ರಸ್ತೆಯ ನಾಯಂಡಹಳ್ಳಿ ಬಳಿ ನೂತನ ರಸ್ತೆ ಮೇಲ್ಸೇತುವೆಯನ್ನು ಸೋಮಣ್ಣ ಅವರು ಇಂದು ಲೋಕಾರ್ಪಣೆ ಮಾಡಿದರು.  ಈ ರಸ್ತೆ ಮೇಲ್ಸೇತುವೆ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. 

ನೂತನ ಮೇಲ್ಸೇತುವೆಯು ವಿಜಯನಗರ ಹಾಗೂ ಪಾದರಾಯನಪುರದ ಜನತೆಗೆ ಸಹಕಾರಿಯಾಗಲಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.

ಇದೇ ವೇಳೆ ಮಾತನಾಡಿದ ಜಮೀರ್ ಅಹ್ಮದ್ ಅವರು, ರಾಜ್ಯದಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಸೋಮಣ್ಣ ಮಾಡುವ ಹಾಗೆ ಯಾರು ಮಾಡೋಕೆ ಸಾಧ್ಯವಿಲ್ಲ ಎಂದು ಗುಣಗಾನ ಮಾಡಿದ್ದಾರೆ. 

ರಾಜ್ಯದಲ್ಲಿನ 220 ಶಾಸಕರು ಸಹ ಸೋಮಣ್ಣ ರೀತಿ ಕ್ಷೇತ್ರದ ಅಭಿವೃದ್ಥಿಯನ್ನು ಮಾಡಲು ಸಾಧ್ಯವಿಲ್ಲ ಎಂದರು. 

ಬಡವರ ಕೆಲಸ ಅಂದರೆ ದೇವರ ಕೆಲಸ ಅಂತ ಭಾವಿಸಿ ಸೋಮಣ್ಣ ಕೆಲಸ ಮಾಡುತ್ತಾರೆ. ನಾನು ಮೊದಲ ಸಲ ಶಾಸಕನಾದಾಗ ನನಗೆ ನನ್ನ ರಾಜಕೀಯ ಸ್ನೇಹಿತರು ಕ್ಷೇತ್ರದ ಕೆಲಸವನ್ನು ಯಾವ ರೀತಿ ಮಾಡಬೇಕು ಅಂತ ಕಲಿಯಬೇಕಾದರೆ ಸೋಮಣ್ಣನ ಕ್ಷೇತ್ರ ವಿಜಯನಗರವನ್ನು ನೋಡಿ ಎಂದು ನನಗೆ ಸಲಹೆ ನೀಡಿದ್ದರು ಎಂದು ಜಮೀರ್ ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ